ಜನವರಿ 27/2024 ಶ್ರೀ ಗೋಪಾಡಿ ಗೆಂಡೋತ್ಸವ ಪ್ರಯುಕ್ತ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಎಸ್ ಸತೀಶ್ ಕುಮಾರ್ ಕೋಟೇಶ್ವರ ಆದ ನಾನು ರಚಿಸಿ, ನಿರ್ದೇಶಿಸಿ, ನಿರ್ಮಾಣ ಮತ್ತು ಅಮೋಘ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಮತ್ತು ಯಕ್ಷಗಾನದ ದಶಾವತಾರಿ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಿಮ್ಮೇಳದಲ್ಲಿ ಈ ವರ್ಷದ ಹೊಚ್ಚ ಹೊಸ ಪೌರಾಣಿಕ ಹಿನ್ನೆಲೆ ಇರುವ ಯಕ್ಷ ಕಥಾ ಹಂದರವೇ
“ಜೈ ಶ್ರೀ ರಾಮ್”
ಬಾಲ್ಯದಲ್ಲಿಯೇ ನನ್ನ ತಂದೆಯವರ ಪ್ರೇರಣೆಯಂತೆ ಪ್ರಭು ಶ್ರೀ ರಾಮ ಚಂದ್ರ,ಮಾತೆ ಸೀತಾದೇವಿ ಮತ್ತು ಹನುಮಂತ ದೇವರ ಭಕ್ತ ನಾಗಿದ್ದವನು.
ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಟರೆ ಹೃದಯದಲ್ಲಿ ಸದಾ ಶ್ರೀ ದೇವರ ಸ್ಮರಣೆ ಬೇಕು!ದೇವನಿಲ್ಲದ ಭರತ ಖಂಡ ಕ್ಷಣಿಕವೂ ಊಹಿಸಲು ಅಸಾಧ್ಯ!ಮಾನವ ಮಾನವರಲ್ಲಿ* ದ್ವೇಷ ಹೆಚ್ಚಿ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆ ಗೌರವ ಮರಿಚಿಕೆ ಆಗಿದೆ!
ಭಾರತದ ಪುಣ್ಯ ಭೂಮಿಯಲ್ಲಿ ಹತ್ತು ಹಲವಾರು ರಾಜ ಮನೆತನದ ಕಥೆ* ಇನ್ನೂ ಕಣ್ಣಿಗೆ ಕಟ್ಟಿದಂತಿದೆ!
ಅದರಲ್ಲೂ ಹಿಂದೂ ಧರ್ಮದ ಪರಂಪರೆ ಸನಾತನ ಸಂಸ್ಕೃತಿಯ ರಕ್ಷಕ ಪ್ರಭು ಶ್ರೀ ರಾಮ ಚಂದ್ರರ “ರಾಮಾಯಣ”ಜಗತ್ತಿಗೆ ಒಂದು ಪಾಠ! ರಾಮಾಯಣ ಮತ್ತು ಮಹಾಭಾರತ ದಿಂದ ಸಮಾಜಕ್ಕೆ ವರ್ಣಿಸಲಾರದ ಆಪತ್ಕಾಲದ ಸಂದೇಶ ಇದೆ! ಇಂದು ಜಗತ್ತಿನಲ್ಲಿ ಸಹೋದರಿಯರು ಅದೆಷ್ಟೋ ಸಂಕಷ್ಟದಲ್ಲಿದ್ದಾರೆ! ಅದೆಷ್ಟೋ ಮಾತೆಯರು ಸಂಕಷ್ಟದಲ್ಲಿದ್ದಾರೆ!
ಇಂದು ನಾವೆಲ್ಲೋ ಖುಷಿಯಾಗಿ ಇದ್ದರೂ ಕೂಡ ಉತ್ತಮವಾದ ಭಾಂದವ್ಯ ಕಳೆದುಕೊಂಡು ಒಳಗಿಂದೊಳಗೆ ಸಂಕಷ್ಟ ವನ್ನು ಎದುರಿಸುತ್ತಿದ್ದೇವು!ಅಂತಹ ಸಂಕಷ್ಟ ಕ್ಕೆ ಪರಿಹಾರ ಬೇಕು!ಪರಮಾಣುಗಳು ಇಂದು ಇಡೀ ಜಗತ್ತನ್ನು ಆಳುತ್ತಿದೆ!
ಅಣು ಅಣುಗಳು ಇಡೀ ಜಗತ್ತಿಗೆ ಶಕ್ತಿ ಯಾಗಿ ಹೊರಹೊಮ್ಮಿದೆ!
ಇಂತಹ ಸಂದರ್ಭದಲ್ಲಿ ನಮಗಿರುವ ಏಕೈಕ ಮಾರ್ಗ ನಾವೆಲ್ಲರೂ ಶಾಂತಿ ಪ್ರೀತಿ ವಿಶ್ವಾಸ ಸೌಹಾರ್ದತೆ ಇಂದ ಬದುಕಬೇಕು!
ರಾಮಾಯಣ ಎಂದರೆ ಸೀತಾ ಮಾತೆಯ ಅಪಹರಣ!ಅಥವಾ ರಾವಣನನ್ನು ಭಕ್ತ ಜೈ ಹನುಮಂತನ ಸಹಾಯ ಸಹಕಾರದೊಂದಿಗೆ ಲಂಕೆಯಲ್ಲಿ ಪ್ರಭು ಶ್ರೀ ರಾಮ ಚಂದ್ರ ವಧಿಸಿದನು ಎಂಬಲ್ಲಿಗೆ ರಾಮಾಯಣ ಅಲ್ಲ!
ಪ್ರಭು ಶ್ರೀ ರಾಮ ಚಂದ್ರ ಮತ್ತು ಮಾತೆ ಸೀತಾದೇವಿಯು ಮತ್ತು ಭಕ್ತ ಜೈ ಹನುಮಂತರೊಂದಿಗೆ ಅನ್ಯೋನ್ಯ ವಾಗಿದ್ದರು ಎಂಬಲ್ಲಿಗೆ ರಾಮಾಯಣ ದ ಪ್ರಮುಖ ಸಂದೇಶ ಇದೆ!
ಒಂದು ಕಡೆ ಅಸುರರು ಇನ್ನೊಂದು ಕಡೆ ರಾಮಭಕ್ತರು ಮತ್ತೊಂದು ಕಡೆ ಪ್ರಭು ಶ್ರೀ ರಾಮಚಂದ್ರ ಮತ್ತು ಮಾತೆ ಸೀತಾದೇವಿಯ ಸಾಂಸಾರಿಕ ಅನ್ಯೋನ್ಯತೆ ಹೇಗಿದೆ ಎಂಬಾ ಸಂದೇಶಗಳನ್ನು ಜೈ ಶ್ರೀ ರಾಮ್ ಕಥಾನಕ ಇಡೀ ಯಕ್ಷ ಇತಿಹಾಸದಲ್ಲಿಯೇ ಹೊಚ್ಚ ಹೊಸ ಸಂದೇಶ ಹೊತ್ತ ಕಥಾ ಹಂದರವಾಗಿ ಹೊರ ಹೊಮ್ಮುತ್ತದೆ! ಜಗತ್ತಿನಲ್ಲಿ ಕೂಡ ಭಗವಂತನ ಮಹಾ ತ್ಕಾ ರ್ಯದಲ್ಲಿ ಕೈ ಜೋಡಿಸದ ಕೆಲವು ಅಸುರರು ಇನ್ನೂ ಕೂಡ ಬೇರೆಯವರ ಜೀವನದಲ್ಲಿ ಆಟವನ್ನು ಆಡುತ್ತಲೇ ಇರುತ್ತಾರೆ! ಹೊಟ್ಟೆ ಕಿಚ್ಚು ಮದ ಮತ್ಸರ ಗಳಿಂದ ಕೆಲವರಿಗೆ ಉದ್ಯೋಗವೇ ಇಲ್ಲದೆ ಕೈ ಕೈ(ರಾಮಾಯಣದ ಕೈಕೆಯಂತೆ) ಹಿಸುಕಿಕೊಳ್ಳುತ್ತಾ ರಾಜಕೀಯ ಮಾಡುತ್ತಲೇ ಇರುತ್ತಾರೆ!

ಅವರೂ ಬದಲಾಗರು ಪರಿಸರವನ್ನೂ ಬದಲಾಗಲು ಬಿಡರು!ಅಂತಹ ನೀಚ ಅದಮರ ದುರಾಂಹಾಕ್ಕಾರಕ್ಕೆ ಮಣ್ಣು ಮುಕ್ಕಿಸುವ ಕೆಲಸ ಆಗಬೇಕಾಗಿದೆ!
ಎಲ್ಲಾ ಸಾಮಾಜಿಕ ಮತ್ತು ಪೌರಾಣಿಕ ಹಿನ್ನೆಲೆ ಇರುವ ಹೊಚ್ಚ ಹೊಸ ಪ್ರಸಂಗವೇ!!
ನನ್ನ ಕನಸಿನ ವಿರಚಿತ “ಜೈ ಶ್ರೀ ರಾಮ್”
ಯಕ್ಷಗಾನ ಲೋಕದಲ್ಲಿ ಹೊಸ ಪ್ರಯೋಗ! ಈ ಯಕ್ಷ ಇತಿಹಾಸದ ಗೆಲುವಿಗಾಗಿ ಅಪಾರ ಸಂಖ್ಯೆಯಲ್ಲಿ ಶ್ರೀ ರಾಮ ಭಕ್ತರು ಆಗಮಿಸಿ ಶುಭಾಶೀರ್ವಾದ ಮಾಡಬೇಕಾಗಿ ವಿನಂತಿ!
ಎರಡನೇ ಪ್ರಯೋಗ ಫೆಬ್ರವರಿ ತಿಂಗಳಲ್ಲಿ ಕೋಟ ಪರಿಸರದಲ್ಲಿ ನೀಡುವರೇ ಯಕ್ಷ ಪ್ರೇಮಿಗಳು ತಿಳಿಸಿದ್ದಾರೆ!
ಮಾರ್ಚ್ ತಿಂಗಳಲ್ಲಿ ಹಿಂದಿನ* ಯಶಸ್ವಿ ಯಕ್ಷ ಕಲಾ ಕುಸುಮ
“ಸತ್ಯ ಪತಿ ವೃತೆ” ಮತ್ತು ಜನವರಿ 27 ರಂದು ಲೋಕಾರ್ಪಣೆ ಗೊಳ್ಳಲ್ಲಿರುವ ಇದೇ “ಜೈ ಶ್ರೀ ರಾಮ್” ಎರಡೂ ಕೂಡ ಕಡಲತಡಿಯಲ್ಲಿ ಯಕ್ಷೋತ್ಸವ ಆಗಿ ಹೊರ ಹೊಮ್ಮಲಿದೆ!
ದಿನಾಂಕ ನಿರೀಕ್ಷಿಸಿ!!!

*ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ,
ನಿರ್ಮಾಪಕರು ನಿರ್ದೇಶಕರು ಪ್ರಸಂಗ ಕರ್ತರು ಟ್ರಸ್ಟೀ ಕೋಟೇಶ್ವರ.
9964183229/9620472014
[email protected]