Join The Telegram | Join The WhatsApp |
ಬೆಳಗಾವಿ :
ಜೈನರ ಪವಿತ್ರ ಸ್ಥಳ ಸಮ್ಮೇದ್ ಶಿಖರ್ ರಕ್ಷಣೆ ಮಾಡುವಂತೆ ಒತ್ತಾಯಿಸಿ ಜೈನ ಬಾಂಧವರು ಬೆಳಗಾವಿಯಲ್ಲಿಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ರವಾನಿಸಿದರು.
20 ತೀರ್ಥಂಕರರು ಮತ್ತು 20 ಕೋಟಿ ಜೈನರು ಮೋಕ್ಷ ಪಡೆದಿರುವ ಪವಿತ್ರ ಸ್ಥಳ ಸಮ್ಮೇದ ಶಿಖರ್ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರಗಳು ಯಾವುದೇ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಐತಿಹಾಸಿಕ ಸ್ಥಳವನ್ನು ಮಾರ್ಪಾಡು ಮಾಡಬಾರದು. ಯಥಾವತ್ ಸ್ವರೂಪವನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿದರು. ಬೋಗಾರವೇಸ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಜೈನ ಬಾಂಧವರು ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ರವಾನೆ ಮಾಡಿದರು.
Join The Telegram | Join The WhatsApp |