Join The Telegram | Join The WhatsApp |
ಅಲಹಾಬಾದ್ :
ನ್ಯಾಯಾಲಯದ ಆವರಣದಲ್ಲಿರುವ ವಕೀಲರಿಂದ ಪೇಟಿಎಂ ಮೂಲಕ ಹಣ ಪಡೆದ ನ್ಯಾಯಾಲಯದ ಜಮಾದಾರ್ ಅವರನ್ನು ಅಮಾನತುಗೊಳಿಸಿದೆ. ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ಘಟನೆ ನಡೆದಿದೆ.
ಜಮಾದಾರ್ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿ ಹೈಕೋರ್ಟ್‌ನಲ್ಲಿ ಆರ್ಡರ್ಲಿ ಆಗಿ ಕೆಲಸ ಮಾಡುತ್ತಿದ್ದು, ವಕೀಲರು ನೀಡುವ ಟಿಪ್ಸ್ ಹಣ ಸ್ವೀಕರಿಸಲು ನ್ಯಾಯಾಲಯದ ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಪ್ರತಿಯನ್ನು ಸಿಕ್ಕಿಸಿಕೊಂಡಿದ್ದರು. ಹೀಗಾಗಿ ರಾಜೇಂದ್ರ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾ.ಅಜಿತ್ ಸಿಂಗ್ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ತಕ್ಷಣದಿಂದಲೇ ರಾಜೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಿ ರಿಜಿಸ್ಟ್ರಾರ್ ಜನರಲ್ ಆಶಿಶ್ ಗಾರ್ಗ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಾನಿರ್ದೇಶಕರಿಗೂ ಸೂಚಿಸಲಾಗಿದೆ.
ಜಮಾದಾರ್ ರಾಜೇಂದ್ರ ಕುಮಾರ್ ಕೋರ್ಟ್ಗೆ ಬರುವ ವಕೀಲರಿಂದ ಟಿಪ್ಸ್ ರೂಪದಲ್ಲಿ ಹಣ ಪಡೆಯುತ್ತಿದ್ದರು. ಹಣ ಕೊಡಲು ಸಾಧ್ಯವಾಗದ ವಕೀಲರಿಂದ ಆನ್‌ಲೈನ್ ಮೂಲಕ ಹಣ ಪಡೆಯಲು ಈ ರೀತಿ ವ್ಯವಸ್ಥೆ ಮಾಡಿಕೊಂಡಿದ್ದರು. ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಸಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ.
Join The Telegram | Join The WhatsApp |