ಕಾರ್ಕಳ: ಉದ್ಭವ ಸ್ವರೂಪಿ, ತ್ರಿವರ್ಣ ರಂಜಿತ ಶಿವಲಿಂಗವಿರುವ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜನವರಿ ತಿಂಗಳ ಮಕರ ಸಂಕ್ರಮಣದ ದಿನದಂದು ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಧ್ವಜಾರೋಹಣಗೊಂಡಿತು.

ಮುಂದಿನ ಒಂಬತ್ತು ದಿನಗಳ ಪರ್ಯಂತ ಉತ್ಸವಾದಿ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದು ಜ. 21 ರಂದು ಮಹಾರಥೋತ್ಸವ ಜರಗಲಿದೆ.