ಬೆಳಗಾವಿ :
ಧಾರವಾಡ ಜೈನ ಮಿಲನ್ ವಲಯ-3 ರ ವತಿಯಿಂದ ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ -7 ಡಿ.3 ರಂದು ನಗರದ ಧರ್ಮನಾಥ ಭವನದಲ್ಲಿ ನಡೆಯಲಿದೆ.

ಶ್ರೀಮತಿ ಹೇಮಾವತಿ ವೀ.ಹೆಗ್ಗಡೆ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆ , ಅನಿತಾ ಸುರೇಂದ್ರಕುಮಾರ ಹಾಗೂ ಸುರೇಂದ್ರ ಕುಮಾರ ಅವರ ಆಶೀರ್ವಾದದೊಂದಿಗೆ ಧರ್ಮಸ್ಥಳ ಸುರೇಂದ್ರ ಕುಮಾರ ಅವರ ಪರಿಕಲ್ಪನೆಯ ಈ ಜಿನ ಭಜನಾ ಸ್ಪರ್ಧೆಯ ಉದ್ಘಾಟನೆ ಬೆಳಗ್ಗೆ 9:15 ಕ್ಕೆ ನಡೆಯಲಿದೆ.

ಭಾರತೀಯ ಜೈನ ಮಿಲನ್ ವಲಯ-8 ರ ಅಧ್ಯಕ್ಷ ಯುವರಾಜ ಭಂಡಾರಿ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಬೆಳಗಾವಿ ಇದರ ಚೇರ್ಮನ್ ಪುಷ್ಪಕ ಹನುಮಣ್ಣವರ, ಜೈನ ಮಿಲನ್ ಸೆಂಟ್ರಲ್ ಬೆಳಗಾವಿ ಗೌರವಾಧ್ಯಕ್ಷ ಗುಣಪಾಲ ಹೆಗ್ಡೆ, ಉದ್ಯಮಿ ಮಹಾವೀರ ಜೈನ್ ಉಪಸ್ಥಿತರಿರುವರು.

ಸಂಜೆ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಧಾರವಾಡ ಎಸ್ ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ನಿರಂಜನ ಕುಮಾರ, ಎಸ್ ಡಿ ಎಂ ಆಡಳಿತ ಮಂಡಳಿ ಸದಸ್ಯೆ ಪದ್ಮಲತಾ ನಿರಂಜನ ಕುಮಾರ, ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವ್ ಸಾಹೇಬ್ ಪಾಟೀಲ ಬೋರಗಾಂವ, ಭಾರತೀಯ ಜೈನ ಮಿಲನ್ ವಲಯ-8 ರ ಅಧ್ಯಕ್ಷ ಯುವರಾಜ ಭಂಡಾರಿ, ಉದ್ಯಮಿ ಗೋಪಾಲ ಜಿನಗೌಡ, ಭಾರತೀಯ ಜೈನ ಮಿಲನ್ ವಲಯ-8 ರ ಕಾರ್ಯದರ್ಶಿ ಪ್ರಶಾಂತ ಎಸ್.ಎ., ದಕ್ಷಿಣ ಭಾರತ ಜೈನ ಸಭಾ ಟ್ರಸ್ಟಿ ಅಶೋಕ ಜೈನ್, ಮಾಣಿಕಬಾಗ ಜೈನ ಬೋರ್ಡಿಂಗ್ ಚೇರ್ ಮನ್ ಪುಷ್ಪಕ ದೊಡ್ಡಣ್ಣವರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಜೈನ ಮಿಲನ್ ಗೌರವಾಧ್ಯಕ್ಷ ಗುಣಪಾಲ ಹೆಗಡೆ, ಉಪಾಧ್ಯಕ್ಷ ಅಜಿತ ಕುಮಾರ ಜೈನ್, ಕಾರ್ಯದರ್ಶಿ ನಾಗರಾಜ ಮರೆಣ್ಣವರ, ಖಜಾಂಚಿ ವೀರೇಂದ್ರ ಹೆಗ್ಡೆ, ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಉಪಸ್ಥಿತರಿವರು.