Join The Telegram | Join The WhatsApp |
ಬೆಂಗಳೂರು-
ಹೊಸದಾಗಿ ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ ಎಂದು ಕಂಪನಿ ಹೇಳಿದೆ.ದೇಶದಲ್ಲಿ 17 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ 184 ನಗರಗಳಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ.
50 ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳ ಅತಿದೊಡ್ಡ ಬಿಡುಗಡೆಯನ್ನು ಘೋಷಿಸಿದೆ. ಇದರೊಂದಿಗೆ ದೇಶದ 184 ನಗರಗಳಲ್ಲಿ ಜಿಯೋ ಬಳಕೆದಾರರು ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ಪಡೆಯುತ್ತಿದ್ದಾರೆ.ಪ್ರಾರಂಭದ ಸೇವೆಯೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಂ ಆಫರ್ ಮೂಲಕ ಆಹ್ವಾನಿಸಿದೆ.
ಈ ವೇಳೆ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರು ಹಾಗೂ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 45 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ, ಇದರೊಂದಿಗೆ ಒಟ್ಟು ಸಂಖ್ಯೆಯನ್ನು ಭಾರತದ 184 ನಗರಗಳಲ್ಲಿ ಪ್ರಾರಂಭಿಸಿದ್ದೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲೆಡೆ 5ಜಿ ಸೇವೆಗಳ ಅತಿದೊಡ್ಡ ಜಾರಿಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
Join The Telegram | Join The WhatsApp |