ರಾಜ್‌ಕೋಟ್:
ಜಾರ್ಖಂಡ್ ವಿರುದ್ದ ಇಲ್ಲಿ
ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರದ ತಾರಾ ಬ್ಯಾಟ‌ರ್ ಚೇತೇಶ್ವ‌ರ್ ಪೂಜಾರ ಔಟಾಗದೆ 243 ರನ್ ಸಿಡಿಸಿ ದಾಖಲೆ ಬರೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರಗಿದು 17ನೇ ದ್ವಿಶತಕ. ಅತಿಹೆಚ್ಚು ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪೂಜಾರ ಜಂಟಿ 4ನೇ ಸ್ಥಾನಕ್ಕೇರಿದರು. ಇಂಗ್ಲೆಂಡ್‌ನ ಹರ್ಬೆರ್ಟ್ ಸಟ್‌ಕ್ಲಿಫ್ ಹಾಗೂ ಮಾರ್ಕ್ ರಾಮ್‌ ಪ್ರಕಾಶ್‌ರ ದಾಖಲೆಯನ್ನು ಸರಿಗಟ್ಟಿದರು.

37 ದ್ವಿಶತಕ ಬಾರಿಸಿರುವ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದರೆ, ವ್ಯಾಲಿ ಹ್ಯಾಮಂಡ್ (36), ಪ್ಯಾಟಿ ಹೆಂಡ್ರೆನ್ (22) ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿದ್ದಾರೆ.