ಬೆಳಗಾವಿ: ಬೆಳಗಾವಿ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಜ್ಞಾನ ಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಖ್ಯಾತ ವಿದ್ವಾಂಸ ವಿದ್ವಾನ್ ರಘೋತ್ತಮಚಾರ್ಯ ನಾಗಸಂಪಿಗೆ ಅವರಿಂದ ಜ. 7 ರಿಂದ 12 ರವರೆಗೆ ಸಂಜೆ 6 ರಿಂದ 8 ಗಂಟೆವರೆಗೆ ಶ್ರೀ ರುಕ್ಮಿಣೀಶ ವಿಜಯ ಎಂಬ ವಿಷಯವಾಗಿ ಪ್ರವಚನ ನಡೆಯಲಿದೆ. ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು 30ನೇ ತತ್ವಜ್ಞಾನ ಸಮ್ಮೇಳನದ ಅಂಗವಾಗಿ 108 ದಿನಗಳ ತತ್ವಜ್ಞಾನ ಮಹೋತ್ಸವದ ನಿಮಿತ್ತ ಜ್ಞಾನ ಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.