Join The Telegram | Join The WhatsApp |
ಬೆಳಗಾವಿ :
ಬೆಳಗಾವಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಉದ್ಯಮಬಾಗದಲ್ಲಿ ಜನವರಿ 6 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಹಾಗೂ ಅಪ್ರೆಂಟಿಸ್ ಶಿಪ್ ಮೇಳವನ್ನು ಆಯೋಜಿಸಲಾಗಿದೆ.
ಐ ಟಿ ಐ ಪಾಸಾದ ಎಲ್ಲ ವೃತ್ತಿಯ ಅಭ್ಯರ್ಥಿಗಳು ಅವಶ್ಯವಿರುವ (ಎಸ್.ಎಸ್.ಎಲ್.ಸಿ., ಐಟಿಐ ಅಂಕಪಟ್ಟಿ, ಆಧಾರ ಕಾರ್ಡ ಹಾಗೂ ಫೋಟೋ ಇತ್ಯಾದಿಗಳನ್ನು) ದಾಖಲಾತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಉದ್ಯಮಬಾಗ, ಬೆಳಗಾವಿ ಇಲ್ಲಿ ಹಾಜರಿರಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9902572875 ಇವರನ್ನು ಸಂಪರ್ಕಿಸಬಹದು ಎಂದು ಬೆಳಗಾವಿ ಪ್ರಾಚಾರ್ಯ ಆರ್. ಎಸ್. ಚಿಕ್ಕಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join The Telegram | Join The WhatsApp |