ಹುಬ್ಬಳ್ಳಿ: ಲಂಡನ್ ನಲ್ಲಿ ಪ್ರವಾಸ ಮಾಡುತ್ತಿರುವ ಕನ್ನಡಿಗರಿಗೆ ಈ ಕಾರು ಕಣ್ಣಿಗೆ ಬಿದ್ದರೆ ಅವರು ಕ್ಷಣಕಾಲ ಅಚ್ಚರಿಗೊಳ್ಳುವುದಂತೂ ಗ್ಯಾರಂಟಿ. KA 25 HBL ಎಂದು ಬರೆಯಿಸಲಾಗಿರುವ ಈ ನಂಬರ್ ಪ್ಲೇಟ್ ನೋಡಿದಾಗ ಅ ಖಂಡಿತವಾಗಿಯೂ ಧಾರವಾಡ ರಿಜಿಸ್ಟ್ರೇಷನ್ ನಂಬರ್ ಎಂದು ಯಾರಿಗಾದರೂ ಅನ್ನಿಸದೇ ಇದರು. ಆದರೂ, ಧಾರವಾಡದ ಆರ್ ಟಿಒದಲ್ಲಿ ರಿಜಿಸ್ಟರ್ ಆಗಿರುವ ಕಾರು, ದೂರದ ಲಂಡನ್ ಗೆ ಹೋಗಿದ್ದಾದರೂ ಹೇಗೆ? ಇಲ್ಲಿದೆ ನೋಡಿ ವಿಚಾರ.

ಆ ಕಾರು ಹುಬ್ಬಳ್ಳಿ ಮೂಲದ ಸಂದೀಪ ಹೊಸಕೋಟಿ ಅವರದ್ದು. ಅವರು ಲಂಡನ್‌ನಲ್ಲಿ ವಾಸವಾಗಿದ್ದಾರೆ. ತನ್ನ ಮೂಲವನ್ನು ನೆನಪಿಸುವ ಕಾರ್ಯ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇತ್ತೀಚೆಗೆ ಅವರು ಹೊಸದಾಗಿ ಕೊಂಡಿದ್ದ ಟೆಸ್ಲಾ ಕಾರಿನ ವಾಹನ ಸಂಖ್ಯೆ ಫಲಕದಲ್ಲಿ ‘ಕೆಎ 25 ಎಚ್‌ಬಿಎಲ್’ ಎಂದು ಹಾಕಿಸುವ ಮೂಲಕ ತವರು ನೆಲದ ಪ್ರೇಮ ಮೆರೆದಿದ್ದಾರೆ.ನಗರದ ಸಂದೀಪ ಹೊಸಕೋಟಿ ಉದ್ಯೋಗ ನಿಮಿತ್ತ ಲಂಡನ್ ನಲ್ಲಿದ್ದಾರೆ. ತಮ್ಮ ಟೆಸ್ಲಾ ಕಾರಿಗೆ ಧಾರವಾಡ ಜಿಲ್ಲಾ ವಾಹನ ನೋಂದಣಿ ಸಂಖ್ಯೆಯಾದ KA-25 ಎಂದು ಬರೆಸಿ ಅದರ ಮುಂದೆ HBLಎಂದು ಬರೆಸಿದ್ದಾರೆ. ಹೆಚ್ ಬಿ ಎಲ್ ಅಂದ್ರೆ ಹುಬ್ಬಳ್ಳಿ ಎಂದು ಬರೆಸಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೇಗೆ ನಂಬರ್ ಪ್ಲೇಟ್ ಮಾದರಿ ಇದೆಯೋ ಅದೇ ರೀತಿಯಲ್ಲೇ ಈ ನಂಬರ್ ಪ್ಲೇಟ್ ಮಾಡಿಸಲಾಗಿದೆ. ಒಟ್ಟಿನಲ್ಲಿ, ಲಂಡನ್‌ನಲ್ಲಿ ಧಾರವಾಡ ಜಿಲ್ಲಾ ವಾಹನ ನೋಂದಣಿ ಸಂಖ್ಯೆ ಹಾಗೂ ಹುಬ್ಬಳ್ಳಿ ಹೆಸರು ರಾರಾಜಿಸುವಂತಾಗಿದೆ.“ಹುಬ್ಬಳ್ಳಿ ಜನ್ಮಭೂಮಿಯಾಗಿದ್ದರೂ, ಉದ್ಯೋಗ ಕಾರಣಕ್ಕೆ ಲಂಡನ್ ನಲ್ಲಿರುವೆ. ತವರು ನೆಲದ ಪ್ರೇಮವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕಾರಿನ ವಾಹನ ಸಂಖ್ಯೆ ಫಲಕದಲ್ಲಿ ಧಾರವಾಡ ವಾಹನ ನೋಂದಣಿ ಸಂಖ್ಯೆಯೊಂದಿಗೆ ಹುಬ್ಬಳ್ಳಿ ಎಂದು ಬರೆಸಿರುವುದು ಕೇವಲ ಸಂಖ್ಯೆ-ಅಕ್ಷರ ಮಾತ್ರವಲ್ಲ ಅದೊಂದು ಭಾವನಾತ್ಮಕ ಸಂಬಂಧದ ಸಂಕೇತವಾಗಿದೆ’’ ಎಂದು ಅವರು ಹೇಳಿದ್ದಾರೆ.ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ದೇಶ ಹಾಗೂ ಜನ್ಮ ನೀಡಿದ ನೆಲವನ್ನು ಮರೆಯಲು ಸಾಧ್ಯವಿಲ್ಲ.

ಮನೆಯ ಸಂಸ್ಕೃತಿಯ ಪ್ರತೀಕವಾಗಿ ಕಾರಿನ ಫಲಕದಲ್ಲಿ ತವರು ನೆಲ ನೆನಪಿಸುವ ಸಂಖ್ಯೆ, ಹೆಸರು ಹಾಕಿಸಿದ್ದಾಗಿ ಸಂದೀಪ ಹೊಸಕೋಟಿ ಅಭಿಪ್ರಾಯಪಟ್ಟಿದ್ದಾರೆ. 2022ರಲ್ಲಿ ಕೆಜಿಎಫ್ ಹೆಸರು ಹಾಕಿಸಿದ್ದ ನಿರ್ಮಾಪಕವಿದೇಶದಲ್ಲಿ ನೆಲೆಸಿರುವ ಅಜಯ್ ಮೈಸೂರು ಎಂಬ ಮೈಸೂರು ಮೂಲದ ಉದ್ಯಮಿಯೊಬ್ಬರು ತಮ್ಮ ಖಯಾಲಿಗಾಗಿ ಭಾರತದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. ಅವರು ತೆಲುಗು ಚಿತ್ರಗಳನ್ನು ನಿರ್ಮಿಸಿದ್ದಾರೆ. 2022ರಲ್ಲಿ ಅವರು ತಾವಿರುವ ದೇಶದಲ್ಲಿ ಖರೀದಿಸಿದ್ದ, ವಿಶ್ವದ ಅತ್ಯಂತ ವೇಗದ ಕಾರು ಎಂದೇ ಪ್ರಸಿದ್ಧವಾಗಿರುವ ಆಸ್ಟಿನ್ ಮಾರ್ಟಿನ್ 707 ಕಾರನ್ನು ತಾವು ಇರುವ ಕಡೆಯೇ ರಿಜಿಸ್ಟ್ರೇಷನ್ ಮಾಡಿಸಿದ್ದರು.

ಆದರೆ, ಕಾರಿನ ನಂಬರ್ ಮೇಲೆ ತಮ್ಮಿಷ್ಟದ ಹೆಸರನ್ನು ಬರೆಸುವ ಸೌಲಭ್ಯ ಅವರು ಇರುವ ದೇಶದಲ್ಲಿದೆ. ಹಾಗಾಗಿ, ಅವರು ತಮ್ಮ ಕಾರಿನ ಮೇಲೆ ಕೆಜಿಎಫ್ ಎಂದು ಹೆಸರು ಹಾಕಿದ್ದರು. ಯಶ್ ಅಭಿನಯದ ಕೆಜಿಎಫ್ ಸಿನಿಮಾದಿಂದ ಪ್ರೇರಿತರಾಗಿ ಅವರು ಹಾಗೆ ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಕೆಜಿಎಫ್ ಎಂದು ಹಾಕಿಸಿದ್ದರು.