ಎಣ್ಮೂರು : ದಿನಾಂಕ 22/09/2024 ನೇ ಆದಿತ್ಯವಾರ ಸರಕಾರಿ ಪ್ರೌಢ ಶಾಲೆ ಎಣ್ಮೂರು ಶಾಲೆಯ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸುಳ್ಯ ವಿಧಾನ ಸಭಾಕ್ಷೇತ್ರದ ಒಳಗಿನ ಆಟಗಾರ ಒಳಗೊಂಡು 10 ತಂಡಗಳ ಪ್ರೋ ಮಾದರಿಯ ಲೀಗ್ ಕಬಡ್ಡಿ ಪಂದ್ಯಾಟ ದಿನಾಂಕ 24/11/2024 ರಂದು ನಡೆಯಯಲಿದೆ. ಇದರ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಬಡ್ಡಿ ಪ್ರಕಟಣಾ ಪತ್ರ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ SDMC ಅಧ್ಯಕ್ಷ ಮೆರಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಪಟ್ಟೆ, ಶಾಲಾ ಶಿಕ್ಷಕ ಸಂತೋಷ್ , ಲಿಂಗಪ್ಪ , ಪ್ರದೀಪ್ ರೈ , ಕೀರ್ತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.