ಬೆಳಗಾವಿ : ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದ ಹೆಮ್ಮೆ ಸುಪುತ್ರಿ ಪಿಎಸ್ಐ ಅನ್ನಪೂರ್ಣಾ ಮುಕ್ಕನ್ನವರ ಅವರು ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದ ಪಾತಕಿಯನ್ನು ತಮ್ಮ ಪ್ರಾಣದ ಹಂಗು ತೊರೆದು ಪಾತಕಿಯನ್ನು ಎನ್ ಕೌಂಟರ್ ನಲ್ಲಿ ಮಟ್ಟಹಾಕಿದ್ದರು.

ಈ ಘಟನೆಯಲ್ಲಿ ಗಾಯಗೊಂಡು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಶುಭ ಹಾರೈಸಿ, ಧೈರ್ಯ ಹೇಳಿದರು.

ಇಂತಹ ಘಟನೆ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘೋರವಾದ ಸಂಗತಿ. ಇಂತಹ ಘೋರ ಕೃತ್ಯಗಳು ಎಂದೆಂದಿಗೂ ನಡೆಯಬಾರದು ಮೃತ ಮಗುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಸಂತಾಪ ಸೂಚಿಸಿದ್ದಾರೆ.
ಪ್ರಮುಖರಾದ ಬಸವರಾಜ ಹುಳ್ಳೇರ,ಶ್ರೀಶೈಲ ತುಪ್ಪದ,ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರಿದ್ದರು.