ಬೈಂದೂರು : ಶ್ರೀ ಈಶ್ವರ ಮಾರಿಕಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ಬೈಂದೂರು ಇವರ ವತಿಯಿಂದ ಪ್ರಥಮ ದೇವರ ಸೇವೆ ಆಟ ಇಂದು ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಗಣ ಹೋಮ, ರಾತ್ರಿ 9:00 ಕ್ಕೆ ಚೌಕಿಯಲ್ಲಿ ಗಣಪತಿ ಪೂಜೆ ನೆರವೇರಲಿದೆ.
ಪ್ರಿಯ ಕಲಾಭಿಮಾನಿಗಳೇ, ಒಂದು ಕಾಲದಲ್ಲಿ ಹೆಸರಾಂತ ಯಕ್ಷಗಾನ ಮೇಳಗಳಲ್ಲಿ ಒಂದಾದ ಕಳವಾಡಿ ಮೇಳದ ಯಕ್ಷಗಾನ ದೇಗುಲದ ವತಿಯಿಂದ ನೂರಾರು ವರ್ಷ ಹಿಂದಿನಿಂದ ಯಕ್ಷಗಾನ ಮೇಳ ತಿರುಗಾಟ ನಡೆಸುತಿದ್ದು ಕಾರಣಾಂತರಗಳಿಂದ ಅದು ಸುಮಾರು 25- 30 ವರ್ಷಗಳಿಂದ ಸ್ಥಗಿತಗೊಂಡಿತ್ತು.
ಇದೀಗ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಕಳವಾಡಿ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಲ್ಲಿ ಮತ್ತೆ ಗೆಜ್ಜೆಸೇವೆ ನೀಡಲು ತಯಾರಿ ನಡೆಸಿದೆ ಹಾಗೂ ಕಳವಾಡಿ ಯಕ್ಷಗಾನ ಮೇಳಕ್ಕೆ ಮತ್ತೆ ಮರುಜೀವ ನೀಡಲಾಗಿದೆ.
ನವೆಂಬರ್ 18ರಂದು ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಳದ ವಠಾರದಲ್ಲಿ ಮೊದಲ ಗೆಜ್ಜೆಸೇವೆ ನೀಡಿದ ಬಳಿಕ ತಿರುಗಾಟ ಆರಂಭಗೊಳ್ಳಲಿದೆ,ಮತ್ತು ರಾತ್ರಿ ಗಂಟೆ 9ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆ ಆಟ ಜರುಗಲಿದೆ.
ಹಾಗೂ ಬರುವ ದಿನಾಂಕ 22 ನವೆಂಬರ್ 2024 ರಂದು ದೇವಳದ ವಠಾರದಲ್ಲಿ ಅದ್ದೂರಿ ವಿಜೃಂಭಣೆಯಿಂದ ಗಣ್ಯಾತಿ ಗಣ್ಯರುಗಳ ಮುಖೇನ ಬಹು ನಿರೀಕ್ಷಿತ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಪ್ರದರ್ಶಿಸಲಾಗುವುದು. ಸರ್ವ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ತಮ್ಮಲ್ಲಿ ಅಪೇಕ್ಷಿಸುವ ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನ ಕಳವಾಡಿ, ಬೈಂದೂರು. ಹೆಚ್ಚಿನ ವಿವರಗಳಿಗಾಗಿ 8095534462ಗೆ ಕರೆ ಮಾಡಿ.