ಬೆಳಗಾವಿ:
ಕೆಎಲ್‌ಎಸ್‌ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್‌.ಹವಾಲ್ದಾರ್‌ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಾನವೀಯತೆ ಜಾತಿ, ಧರ್ಮ ಎಲ್ಲಕ್ಕಿಂತ ಮಿಗಿಲಾದದ್ದು, ಇದು ಕನಕದಾಸರು, ಬುದ್ಧ ಮತ್ತು ಅಂಬೇಡ್ಕರ್‌ ಅವರು ನೀಡಿದ ಬೋಧನೆಗಳು. ಕೆಲಸವೇ ಕಾರ್ಯ ಸಾಧನೆ, ಎಲ್ಲೆಲ್ಲೂ ದೇವರನ್ನು ಕಾಣಬೇಕು ಎಂಬುದು ಕನಕದಾಸರು ತೋರಿದ ಮಾರ್ಗ ಎಂದರು.

ಪ್ರಸನ್ನಕುಮಾರ, ಪಿ.ಜಿ.ಕೆಂಪಣ್ಣನವರ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಎಸ್.ಎಸ್.ಹೆಗಡೆ ಅವರು ಗೀತೆ ಹಾಡಿದರು. ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.