Join The Telegram | Join The WhatsApp |
ಬೆಳಗಾವಿ :
ಸಾಹಿತಿ ಬಿ.ಎಸ್.ಗವಿಮಠ ಅವರಿಗೆ ಕನ್ನಡ ಗಡಿ ತಿಲಕ ಹಾಗೂ ಸಾಹಿತಿ ಅನಿಲ ಗುನ್ನಾಪುರ ಅವರ ಹೂವಿನ ನೆರಳು ಕಥಾ ಸಂಕಲನಕ್ಕೆ ಜನ್ನಾ ಸನದಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ 67 ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜನ್ನಾ ಸನದಿ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರು ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ರಾಮಕೃಷ್ಣ ಮರಾಠೆ ಅವರನ್ನು ಸಹಾ ಸನ್ಮಾನಿಸಲಾಯಿತು.
ಕೆಎಲ್ಇ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕೋಶಾಧ್ಯಕ್ಷ ಸಿ.ಎಂ.ಬೂದಿಹಾಳ ಸ್ವಾಗತಿಸಿದರು. ಉಪಾಧ್ಯಕ್ಷ ಎ.ಎ.ಸನದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಬಾಗೇವಾಡಿ ನಿರೂಪಿಸಿದರು. ರಮಾನಾಥ ಬನಶಂಕರಿ ವಂದಿಸಿದರು.
Join The Telegram | Join The WhatsApp |