ಬೆಳಗಾವಿ :
ಇಡೀ ಮದುವೆ ಮಂಟಪವೇ ಕನ್ನಡಮಯ ಸ್ವಾಗತಕ್ಕೆ ಪ್ರವೇಶ ದ್ವಾರದಲ್ಲಿಯೇ ಚೆನ್ನಮ್ಮ,ರಾಯಣ್ಣ,ಬೆಳವಡಿ ಮಲ್ಲಮ್ಮ ಬಸವಣ್ಣರ ಪ್ರತಿಮೆಗಳು!

ಮೈ ಮನಸ್ಸುಗಳ ತುಂಬ ಕನ್ನಡವನ್ನೇ ತುಂಬಿಕೊಂಡ,ಕನ್ನಡವನ್ನೇ ಉಸಿರಾಗಿಸಿದ ಕನ್ನಡ ಯುವಕ ,” ರಾಯಣ್ಣ ಪುಟದ”
ನಿರ್ವಾಹಕರೂ ಆಗಿರುವ ದೀಪಕ ಮುಂಗರವಾಡಿಯ ವಿವಾಹ ಇಂದು ಕನ್ನಡತಿ ರಾಜೇಶ್ವರಿಯ ಜೊತೆಗೆ
ಬೆಳಗಾವಿಯ ಅಟೊನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪದಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿ
ನೆರವೇರಿತು.

ಪ್ರವೇಶ ದ್ವಾರದಲ್ಲಿಯೇ ಕಿತ್ತೂರು ಚನ್ನಮ್ಮ,ಸಂಗೊಳ್ಳಿ ರಾಯಣ್ಣ, ಬಸವೇಶ್ವರರ ಪ್ರತಿಮೆಗಳು ಸ್ವಾಗತಕ್ಕೆ
ನಿಂತಿದ್ದು ಒಂದು ವಿಶೇಷವಾಗಿತ್ತು.

ಮಂಟಪದ ಪ್ರವೇಶ ದ್ವಾರದಿಂದ
ವೇದಿಕೆಯವರೆಗೆ ಎಲ್ಲವೂ ಕನ್ನಡಮಯವೇ. ಮಂಟಪದೊಳಗೆ ಕನ್ನಡಿಗರಲ್ಲಿ
ಕನ್ನಡಾಭಿಮಾನ ಹುಟ್ಟಿಸುವ ಸಾಲುಗಳುಳ್ಳ ಫಲಕಗಳನ್ನು ಹಾಕಲಾಗಿತ್ತು.

ಹುಕ್ಕೇರಿ ಹಿರೇಮಠದ
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ವಧುವರರನ್ನು ಆಶೀರ್ವದಿಸಲು
ಆಗಮಿಸಿದ್ದರು.

ಈ ಕನ್ನಡಿಗ ಕನ್ನಡತಿಯ ಮದುವೆಗೆ ಬೆಳಗಾವಿಯ ಪತ್ರಕರ್ತರ ದಂಡೇ
ಆಗಮಿಸಿತ್ತು.ವಿದ್ಯುನ್ಮಾನ ಮಾಧ್ಯಮದವರು ಈ ಮದುವೆಯ ಬಗ್ಗೆ ವಿಶೇಷ ವರದಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ
ಒಂದು ಭಾಗದಂತೆ ಕಂಡು ಬಂದ ಇಂದಿನ ಮದುವೆ ಕನ್ನಡ ಹೋರಾಟಗಾರರಿಗೆ ಒಂದು ಮಾದರಿ ಎನಿಸಿತು.

ಅಶೋಕ ಚಂದರಗಿ
ಬೆಳಗಾವಿ
9620114466