Join The Telegram | Join The WhatsApp |
ಬೆಂಗಳೂರು-
ಕಾಂತಾರಾ ಸಿನಿಮಾ ನಮ್ಮ ಕನ್ನಡ ಸಿನಿಮಾ ರಂಗದ ಪ್ರತಿಷ್ಠೆಯನ್ನೇ ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದು, ಸೆಪ್ಟೆಂಬರ್ 30ನೇ ತಾರೀಕು ಬಿಡುಗಡೆಯಾಗಿ ಹಲವಾರು ಭಾಷೆಗಳಲ್ಲಿ ಬಂದಿದೆ ಹಾಗೂ ಅಂತರರಾಷ್ಟ್ರೀಯ ಮ್ಯಾಗಜೀನ್ ಗಳಲ್ಲಿ ಸಹಿತ ಮೂಡಿ ಬಂದಿದ್ದು 500 ಕೋಟಿ ಗಳಿಕೆ ಮಾಡಿದ ಚಲನಚಿತ್ರವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿ ಬರೆದ ಉತ್ತರ ನೋಡಿದರೆ ಗೊತ್ತಾಗುತ್ತದೆ. ಕಾಂತಾರ ಸಿನಿಮಾ ಬಳಿಕ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಮತ್ತಷ್ಟು ಜಾಸ್ತಿ ಆಗಿದೆ.
ಶೆಟ್ಟಿ ಸಿನಿಮಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿಯ ಉತ್ತರನೇ ಸಾಕ್ಷಿ. ಅಷ್ಟಕ್ಕೂ ಮೂರನೇ ತರಗತಿ ವಿದ್ಯಾರ್ಥಿ ಮಾಡಿದ್ದಾದೂ ಏನು ಅಂತಿರಾ?, ಪರೀಕ್ಷೆಯಲ್ಲಿ ‘ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ’ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ. ಅಲ್ಲದೇ ಆ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ವಿದ್ಯಾರ್ಥಿ ಉತ್ತರ ಹೀಗಿತ್ತು, ‘ಕ್ಷೇತ್ರಪಾಲ, ಗುಳಿಗಾ ಮತ್ತು ದೈವ’ ಎಂದು ಬರೆದಿದ್ದಾನೆ. ಪುಟ್ಟ ಬಾಲಕ ಪರೀಕ್ಷೆಯಲ್ಲಿ ಬರೆದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಚಲನಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ, ಶೆಟ್ಟಿ, ಭೂತಕೋಲ ಕಲಾವಿದ ಮತ್ತು ಕಂಬಳ ಚಾಂಪಿಯನ್ ಆಗಿ ನಟಿಸಿದ್ದಾರೆ. ( ಕಿಶೋರ್ ), ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Join The Telegram | Join The WhatsApp |