ಉಡುಪಿ :
ಖ್ಯಾತ ಸಮಾಜಸೇವಕ ಹಾಗೂ ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯ ಪಕ್ಕಾಸಿಗೆ ಸೀರೆ ಬಿಗಿದು ಅದರ ಎರಡು ತುದಿಗೆ ದಂಪತಿ ನೇಣು ಬಿಗಿದುಕೊಂಡಿದ್ದಾರೆ.

ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವುದಾಗಿ ತಿಳಿದು ಬಂದಿದೆ. ಲೀಲಾಧರ ಶೆಟ್ಟಿ-68 ಅವರ ಪತ್ನಿ ವಸುಂಧರಾ-58 ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಸೋಮವಾರ ತಡರಾತ್ರಿ ಕಾಪುವಿನ ಮನೆಯಲ್ಲಿ ಪತ್ನಿಯ ಜೊತೆ ಕಾಪು ಲೀಲಾಧರ ಶೆಟ್ಟಿ ನೇಣಿಗೆ ಶರಣಾಗಿದ್ದಾರೆ. ತಮ್ಮ ಮನೆಯ ಪಕ್ಕಾಸಿಗೆ ಸೀರೆ ಬಿಗಿದು ಅದರ ಎರಡು ತುದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲೀಲಾಧರ ಶೆಟ್ಟಿ ಖ್ಯಾತ ಸಮಾಜ ಸೇವಕ ಹಾಗೂ ರಂಗ ಕಲಾವಿದರು. ಧಾರ್ಮಿಕ ಮತ್ತು ಸಾಮಾಜಿಕ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡವರು. ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ‌ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ‌ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಎಲ್.ಐ.ಸಿ. ಏಜಂಟರಾಗಿ, ಕಲಾ ಸಂಘಟಕ, ಕಲಾಪೋಷಕರಾಗಿದ್ದ ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ಚಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ಸೇವೆಗಾಗಿ ಎಲ್ಲರೂ ಅವರನ್ನು ಆತ್ಮೀಯವಾಗಿ ಲೀಲಣ್ಣ ಎಂದೇ ಕರೆಯುತ್ತಿದ್ದರು.