ಕಾಪು ಹೊಸ ಮಾರಿಗುಡಿಯ ಅದ್ಭುತ ನಿರ್ಮಾಣ ಕುರಿತು ಜಗತ್ತೇ ಮಾತನಾಡುತ್ತಿದೆ. ಬಾಲಿವುಡ್‌ ತಾರೆಯರು, ಕ್ರಿಕೆಟಿಗರು, ದಿಗ್ಗಜ ಉದ್ಯಮಿಗಳು ತುಳುನಾಡಿಗೆ ದೌಡಾಯಿಸುತ್ತಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರಿಗುಡಿ ನಿರ್ಮಾಣ ಶೈಲಿಯನ್ನು ಕೊಂಡಾಡಿದ್ದು ಮಾತ್ರವಲ್ಲದೆ ಇದು ನನ್ನ #ಭಾಗ್ಯ ಎಂದು ಬಣ್ಣಿಸಿದ್ದಾರೆ.
ಇದಕ್ಕೆ ಕಾರಣ ಪಾರಂಪರಿಕ ಶೈಲಿಯ ಕೆಂಪು ಶಿಲೆಯ ಮಾರಿಗುಡಿಯ ಶಿಲಾ ಶಿಲ್ಪ, ಕಾಷ್ಠ ಶಿಲ್ಪ, ಸ್ವರ್ಣ ಗದ್ದುಗೆಯ ಅದ್ಭುತ ನಿರ್ಮಾಣ.
ಹೊಸ ಮಾರಿಗುಡಿಯು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣಗೊಂಡ ಹಂಪಿಯ ಶಿಲ್ಪ ಕಲಾವೈಭವ ನೆನಪಿಸುತ್ತಿದೆ ಎಂದು ವಿಶ್ವಕರ್ಮ ಸಮುದಾಯದ ಜಗದ್ಗುರು ಕಾಳಹಸ್ತೇಂದ್ರ ಸ್ವಾಮೀಜಿ ಕೊಂಡಾಡಿದ್ರು.
ಇಷ್ಟೆಲ್ಲ ವೈಭವದಿಂದ ಕಂಗೊಳಿಸಬೇಕಾದರೆ ಇದರ ಹಿಂದೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸೂತ್ರಧಾರರಂತೆಯೂ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ̤ ಕೆ. ಪ್ರಕಾಶ್‌ ಶೆಟ್ಟಿ ಮಾರ್ಗದರ್ಶಕರಂತೆಯೂ, ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಅಧ್ಯಕ್ಷ #ರವಿಸುಂದರ್‌ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭಗವಾನ್‌ದಾಸ್‌ ಶೆಟ್ಟಿಗಾರ್‌, ಕಾರ್ಯದರ್ಶಿ ಸುಹಾಸ್‌ ಹೆಗ್ಡೆ ನಂದಳಿಕೆ, ‌ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮನೋಹರ. ಎಸ್. ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ರಘುಪತಿ ಭಟ್ ಮೊದಲಾದ ಸಮಾಜದ ಗಣ್ಯರು ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು, ಸಾವಿರ ಸೀಮೆಯ ಭಕ್ತರು, ಪರವೂರಿನ ದಾನಿಗಳು ಇದ್ದಾರೆ.
ದೇವಸ್ಥಾನದ ಪ್ರಧಾನ ತಂತ್ರಿ ಜೋತಿಷ ವಿದ್ವಾನ್‌ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನವ ಪೀಠ, ನೀವು ನಾಗದರ್ಶನ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ನಭೂತೋ ಎಂಬಂತೆ ನಡೆದಿದೆ.

ಮಾರಿಗುಡಿ ಈ ರೀತಿ ಕಂಗೊಳಿಸಬೇಕಾದರೆ ತೆರೆಯ ಮರೆಯಲ್ಲಿಯೇ ಇದ್ದು 6 ವರ್ಷ ತಪಸ್ಸಿನಂತೆ ದುಡಿದ ಎಂದೂ ಪ್ರಚಾರಕ್ಕೆ ಬಾರದ ಒಬ್ಬ ವ್ಯಕ್ತಿಯನ್ನು ಅವರ ಶಕ್ತಿಯನ್ನು ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಈ ಪುಣ್ಯ ಕಾಲದಲ್ಲಿ ಉದ್ಘರಿಸಲೇ ಬೇಕು.
6 ವರ್ಷಗಳ ಹಿಂದೆ ಈ ಗುಡಿಗೆ ಶಂಕುಸ್ಥಾಪನೆ ಮೂಲಕ ಸಮಸ್ತ ಜೀರ್ಣೋದ್ಧಾರ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಸುಜಯ ಕುಮಾರ್‌‌ ಶೆಟ್ಟಿ ಕಾರ್ಕಳ.
ಕನ್‌ಸ್ಟ್ರಕ್ಷನ್‌ ಕ್ಷೇತ್ರದಲ್ಲಿ ನಂಬಿಕಸ್ಥ ಎಸ್‌ಕೆಎಸ್‌ ಸಂಸ್ಥೆಯನ್ನು ಸ್ಥಾಪಿಸಿದ ಶೆಟ್ಟರು, ದೇಶದ ವಿವಿಧೆಡೆ ಸರಕಾರದ ಕಾಮಗಾರಿಗಳ ಯಶಸ್ವಿಯಾಗಿ ನಡೆಸುವ ಕ್ಲಾಸ್‌ 1 ಗುತ್ತಿಗೆದಾರರು.
ಎಲ್ಲೂ ಖಾಸಗಿ ಕಾಮಗಾರಿ ವಹಿಸಿಕೊಳ್ಳುವುದಿಲ್ಲ. ಆದರೆ ದೇವಸ್ಥಾನ ನಿರ್ಮಾಣ ಕಾರ್ಯ ಎಂದರೆ ಕಿಂಚಿತ್ತೂ ಲಾಭಾಂಶ ಪಡೆಯದೆ ಒಪ್ಪಿಕೊಳ್ಳುತ್ತಾರೆ.
ಕಾರ್ಕಳ ಮಾರಿಗುಡಿಯನ್ನು ಶಾಸಕ, ಅಂದಿನ ಸಚಿವ ವಿ. ಸುನಿಲ್‌ ಕುಮಾರ್‌ ಚಿಂತನೆಗೆ ಪೂರಕವಾಗಿ ಕೇವಲ 9 ತಿಂಗಳಲ್ಲಿ ಅದ್ಭುತ ಎಂಬಂತೆ ನಿರ್ಮಿಸಿ ಸಾಧಿಸಿ ತೋರಿಸಿದವರು ಸುಜಯ್‌ ಶೆಟ್ಟರು,


ಕಾಪುಹೊಸ_ಮಾರಿಗುಡಿಯಲ್ಲಿಯೂ ತಮ್ಮ ಅಗಾಧ ಪ್ರತಿಭೆ ತೋರಿಸಿ, ಆಸ್ತಿಕರು ಭಯ ಭಕ್ತಿಯಿಂದ ಉಘೇ ಉಘೇ ಎನ್ನುವಂತೆ ಮಾಡಿದ್ದಾರೆ.
6 ವರ್ಷದ ಹಿಂದೆ ಪಂಚಾಂಗ ಶುರು ! ಮುಗಿಯರಲು 2 ವರ್ಷ ತಗುಲಿತು!!. 15 ಅಡಿ ಆಳದಿಂದ ಮೇಲೆದ್ದು ಬಂದ ಮಾರಿಗುಡಿ, #ಇಳಕಲ್‌ ನ ಕೆಂಪು ಕಲ್ಲಿನ ದೇಗುಲವಾಗಿ, ಶಿಲಾಮಯ ಗರ್ಭಗುಡಿಯಾಗಿ ಕಂಗೊಳಿಸಿತು. ಸುಜಯ ಶೆಟ್ಟರ ಬಳಗದ ವಿಷ್ಣುಮೂರ್ತಿ‌ ಭಟ್‌‌ಎಲ್ಲೂರು ಶಿಲ್ಪ ವಿಭಾಗ ನೋಡಿಕೊಂಡರೆ, ಸಮಿತಿ ಕಾರ್ಯದರ್ಶಿ ಸುಹಾಸ್‌ ಹೆಗ್ಡೆ ನಂದಳಿಕೆ ನೇತೃತ್ವದಲ್ಲಿ ಕುಶಲಕರ್ಮಿಗಳಿಂದ ಕಾಷ್ಠ ಶಿಲ್ಪ ಪೂರ್ಣಗೊಂಡಿತು.
ಸರಕಾರದ ಪಾತ್ರ?
ಮಾರಿಗುಡಿಗೆ ಸರಕಾರದಿಂದ ಕಿಂಚಿತ್ತು ಅನುದಾನ ಬಂದಿಲ್ಲ. ಆದರೆ ಸರಕಾರಿ ನಿಯಮಗಳ ಪ್ರಕಾರವೇ ಗುತ್ತಿಗೆ ವಹಿಸಿಕೊಳ್ಳಬೇಕು!
ಭಕ್ತರಿಂದ ಹಣ ಸಂಗ್ರಹಿಸಿ ಅದನ್ನು ಲೋಕೋಪಯೋಗಿ ಇಲಾಖೆಯಲ್ಲಿ ಠೇವಣಿ ಇಡಬೇಕು. ಅಲ್ಲಿಂದ ಗುತ್ತಿಗೆದಾರರಿಗೆ ಪಾವತಿ ಆಗುತ್ತದೆ. ತುಳುನಾಡಿನಲ್ಲಿ ಮಾತ್ರ ಸರಕಾರದ ಅನುದಾನ ಇಲ್ಲದೆ ದೇಗುಲ ನಿರ್ಮಾಣ ಆಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇದು ಸಾಧ್ಯವಾಗಿರುವುದು ತುಳುನಾಡಿನ ದೈವ ಭಕ್ತರಿಂದ.

ಸುಜಯ ಶೆಟ್ರು ಕಾರ್ಕಳದಲ್ಲಿ ಪಾರಂಪರಿಕ ಶೈಲಿಯ ಕೋರ್ಟ್‌ ನಿರ್ಮಾಣ ಮಾಡಿದ ಸಂದರ್ಭ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದ ಅಬ್ದುಲ್‌ ನಜೀರ್‌ ಅವರು ಸುಜಯ ಶೆಟ್ಟರ ಹೆಸರನ್ನು ಉಲ್ಲೇಖಿಸಿ ಇಂತಹ ಗುತ್ತಿಗೆದಾರರು ಇದ್ದರೆ ದೇಶ ಸುಭೀಕ್ಷವಾಗುತ್ತದೆ ಎಂದು ಬೆನ್ನು ತಟ್ಟಿದ್ದರು.

ಸುಜಯ್ ಅವರ
ಎಸ್‌ಕೆಎಸ್‌ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನುರಿತ ಕೆಲಸ ಗಾರರು ಇದ್ದಾರೆ. ನೌಕರರ/ ಕಾರ್ಮಿಕರ #ಮಕ್ಕಳ ಶಾಲೆ ಫೀಸ್‌, ಆರೋಗ್ಯ ರಕ್ಷಣೆ ಹೊಣೆ ಹೊತ್ತುಕೊಳ್ಳುವ ಮೂಲಕ ಹೃದಯವಂತ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಖಂಡಿತಾ ಇಂಥವರಿಗೊಂದು ತುಳುನಾಡಿನ ಸಮಸ್ತ ಆಸ್ತಿಕರು ಅಭಿನಂದನೆಯ ಜೊತೆ ಧನ್ಯವಾದ ಸಲ್ಲಿಸಲೇ ಬೇಕು.

ಜಿತೇಂದ್ರ ಕುಂದೇಶ್ವರ