ಬೆಂಗಳೂರು:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2023-24ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿಕಾಂ., ಬಿಎಸ್‌ಡಬ್ಲ್ಯೂ, ಬಿ.ಎಸ್ಸಿ, ಬಿಬಿಎ, ಬಿ.ಲಿಬ್. ಐ.ಎಸ್ಸಿ, ಮತ್ತು ಎಂಎ, ಎಂಕಾಂ, ಎಂಎಸ್ಸಿ., ಎಂಬಿಎ, ಎಂಎಸ್‌ಡಬ್ಲ್ಯೂ, ಎಂಸಿಎ, ಎಂಸಿಜೆ, ಎಂ.ಲಿಬ್, ಐ.ಎಸ್ಸಿ ಹಾಗೂ ಪಿಜಿ ಡಿಪ್ಲೊಮಾ/ ಸರ್ಟಿಫಿಕೇಟ್ ಪ್ರೋಗ್ರಾಗಳಿಗೆ ಪ್ರವೇಶ ಜ.10 ರಿಂದ ಪ್ರಾರಂಭವಾಗಿದೆ.

www. ksoumysuru.ac.i ನಲ್ಲಿ ksouportal.com ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅರ್ಜಿಯನ್ನು ಪ್ರಾದೇಶಿಕ ಕೇಂದ್ರದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಗೆ ವಿದ್ಯಾರ್ಥಿಗಳು ಹಾಜರಾಗಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯ ಬಹುದು. ಹೆಚ್ಚಿನ ಮಾಹಿತಿಗಾಗಿ ರೋಹಿತ್ ಎಚ್‌. ಎಸ್., ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ- 03 (ಯಲಹಂಕ) ಆದಿತ್ಯ ಸಮೂಹ ಶಿಕ್ಷಣ ಸಂಸ್ಥೆಗಳು, ನಂ.12. ಕೋಗಿಲು ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ದೇವಸ್ಥಾನ ಹಿಂಭಾಗ ಮಾರುತಿನಗರ, ಯಲಹಂಕ, ಬೆಂಗಳೂ ರು-560064 ಹಾಗೂ ದೂರವಾಣಿ ಸಂಖ್ಯೆ : 9880526439, 9019526439, 7337718249 ಮತ್ತು 8217292319 ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.