Join The Telegram | Join The WhatsApp |
ಬೆಳಗಾವಿ:
ಎಂಇಎಸ್ ಗೂಂಡಾಗಿರಿ ಹಾಗೂ ಕನ್ನಡಿಗರ ಮೇಲೆ ಪೊಲೀಸ್ ಹಲ್ಲೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಳಗಾವಿ ಚಲೋ ನಡೆಸಿತು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ವಾಹನಗಳು ಹಾಗೂ ಸಾವಿರಾರು ಹಳದಿ-ಕೆಂಪು ಕನ್ನಡ ಧ್ವಜ ಗಳನ್ನು ಹೊತ್ತ ಸಾವಿರಾರು ಕಾರ್ಯಕರ್ತರು ಪೊಲೀಸರ ವಿರೋಧದ ನಡುವೆಯೂ ನಗರದತ್ತ ನುಗ್ಗಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ ನೂರಾರು ವಾಹನಗಳೊಂದಿಗೆ ಬೆಳಗಾವಿಯತ್ತ ಹೊರಟ ನಾರಾಯಣಗೌಡ ಮತ್ತು ಸಾವಿರಾರು ಕಾರ್ಯಕರ್ತರನ್ನು ಹಿರೇಬಾಗೆವಾಡಿ ಟೋಲ್ ನಲ್ಲಿ ಪೊಲೀಸರು ಬೆಳಗಾವಿ ನಗರ ಪ್ರವೇಶಿಸದಂತೆ ತಡೆದರು.
ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಕಾಲ್ನಡಿಗೆಯಲ್ಲಿಯೇ ಬೆಳಗಾವಿ ನಗರದತ್ತ ಸುಮಾರು 25 ಕಿಮೀ ನಡಿಗೆ ಹೊರಟು ನಡೆದರು.
ಕರವೇ ಬೆಳಗಾವಿಯತ್ತ ನುಗ್ಗುತ್ತಿರುವುದರಿಂದ ಬೆಳಗಾವಿ ನಗರದಾದ್ಯಂತ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಹಾಕಲಾಗಿದೆ.
ಕನ್ನಡಿಗ ವಿದ್ಯಾರ್ಥಿ ಮೇಲೆ ಎಂಇಎಸ್ ಬೆಂಬಲಿತ ಯುವಕರು ಹಲ್ಲೆ ನಡೆಸಿದ ನಂತರ ಠಾಣೆಗೆ ದೂರು ಕೊಡಲು ಹೋದ ವಿದ್ಯಾರ್ಥಿಯನ್ನು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೋಸರು ಠಾಣೆಯಲ್ಲಿ ಎರ್ರಾಬಿರ್ರಿ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು.
ಕನ್ನಡ ವಿರೋಧಿ ಹಲ್ಲೆಕೋರ ಪೊಲೀಸ್ ಅಧಿಕಾರಿಯನ್ನು ತತಕ್ಷಣ ಅಮಾನತು ಪಡಿಸಿ ಅರೆಸ್ಟ್ ಮಾಡುವಂತೆ ಕರವೇ ಒತ್ತಾಯಿಸಿದೆ.
Join The Telegram | Join The WhatsApp |