ಹೆಬ್ರಿ : ದಿನಾಂಕ:26:07:2024 ರಂದು ಅಮೃತ ಭಾರತಿ ವಿದ್ಯಾ ಕೇಂದ್ರದ ಅನ್ನಪೂರ್ಣ ಸಭಾಭವನದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ ಶೆಣೈಯವರ ಅಧ್ಯಕ್ಷತೆಯಲ್ಲಿ ಹುತಾತ್ಮ ವೀರ ಯೋಧರನ್ನು ಸ್ಮರಿಸುತ್ತಾ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈಯುವುದರೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬೇದಾರ್ ಅನಂತ ರಾಮರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸುಬೇದಾರ್ ಅನಂತ ರಾಮರವರು ತಮ್ಮ 24 ವರ್ಷದ ಭಾರತೀಯ ಸೇನೆಯಲ್ಲಿ ತನ್ನ ಸೇವೆ ಹಾಗೂ ಕಾರ್ಗಿಲ್ ಕದನ ಭೂಮಿಯಲ್ಲಿ ತನ್ನ ಅನುಭವ ಹಾಗೂ ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತೀಯ ಸೈನಿಕರ ಹೋರಾಟವನ್ನು ಸ್ಮರಿಸುತ್ತಾ ಗದ್ಗದಿತರಾದರು. ಯಾವ ಉದ್ಯೋಗವನ್ನು ಆರಿಸಿಕೊಂಡರೂ ದೇಶಪ್ರೇಮ ನಿಮ್ಮಲ್ಲಿರಲಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತನ್ನು ನುಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಮುಖರಾದ ಶ್ರೇಯಸ್ ಅಂಚನ್, ಮನು ಶೆಟ್ಟಿ ,ಶ್ರೀ ವತ್ಸ ಭಾಗವಹಿಸಿದ್ದರು,
ಹಾಗೂ ಸಂಸ್ಥೆಯ ಪ್ರಾಚಾರ್ಯ ಅರುಣ್ ಹೆಚ್ ಮತ್ತು ಮುಖ್ಯೋಪಾಧ್ಯಾಯಿನಿ ಅನಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೇಯಸ್, ಪ್ರಶಾಂತ್, , ಸೃಜನ್ಅರುಣ್, ನಿಧಿ ,ಹಾಲಸ್ವಾಮಿ ನಡೆಸಿಕೊಟ್ಟರು.