Join The Telegram | Join The WhatsApp |
ಕೊರಗಜ್ಜ ದೈವದ ಕಾರಣಿಕ, ಪವಾಡ ಇದೀಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಮನೆ ಮಾತು. ಈ ನಿಟ್ಟಿನಲ್ಲಿ ಹೊಸ ಚಲನಚಿತ್ರ ಕೊರಗಜ್ಜನ ಲೀಲೆಯನ್ನು ತೋರಿಸಿಕೊಡುವುದರೊಂದಿಗೆ ಯಶಸ್ವಿ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮಂಗಳೂರು :
ಕೊರಗಜ್ಜ ದೈವದ ಕುರಿತ ಕರಿ ಹೈದ ಕರಿ ಅಜ್ಜ ಎಂಬ ಚಲನಚಿತ್ರ ಕೆಲವೇ ತಿಂಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
ಚಿತ್ರದ ಮುಹೂರ್ತ ನೆರವೇರಿದೆ. ಕಬೀರ್ ಬೇಡಿ, ಶ್ರುತಿ, ಭವ್ಯ ಮುಂತಾದ ಕಲಾವಿದರು ಭಾಗವಹಿಸುವುದು ವಿಶೇಷ.ಧೃತಿ ಕ್ರಿಯೇಶನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣವಾಗಲಿದೆ.ತ್ರಿವಿಕ್ರಮ ಸಪಲ್ಯ ಬಂಡವಾಳ ಹೂಡುತ್ತಿದ್ದಾರೆ. ಸುಧೀರ ಅತ್ತಾವರ ನಿರ್ದೇಶನವಿದೆ.
ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ ಪೂಂಜಾ ಚಿತ್ರಕ್ಕೆ ಚಾಲನೆ ನೀಡಿದರು. ಮಾತೃಶ್ರೀ ಕಮಲಾ ಕೆ.ಸಪಲ್ಯ ಆರಂಭ ಫಲಕ ತೋರಿಸಿದರು.ಕೊರಗಜ್ಜ ದೈವದ ಕೊರಗ ಜನಾಂಗದವರ ಜತೆ ಚರ್ಚಿಸಿ ಮಾಹಿತಿ ಕಲೆ ಹಾಕಲಾಗಿದೆ.
ಸುಮಾರು 12 ನೇ ಶತಮಾನದಲ್ಲಿದ್ದ ಕೊರಗಜ್ಜನ ನೈಜ ಬದುಕಿನ ಬಗ್ಗೆ ಯಾರಿಗೂ ತಿಳಿದಿರದ ಸಾಕಷ್ಟು ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ.
Join The Telegram | Join The WhatsApp |