ಬೆಳಗಾವಿ: ಕಳೆದ ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಕದ್ದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೌಂದಲಗಾದಲ್ಲಿ ಮುಚ್ಚಿಟ್ಟಿದ್ದ 6.60 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಿಪ್ಪಾಣಿ ಸ್ಥಳಿಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ ನಾಯಿಕವಾಡಿ ಅವರು ಜುಲೈ 19ರಂದು ಸಂಜೆ ಸುಮಾರಿಗೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾಂಗೂರು ತಿರುವು ಬಳಿ ಮೂವರು ಕಳವು ಮಾಡಿದ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಕೃತ್ಯ ಬಯಲಾಗಿದೆ.

ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಸುನಿಲ್ ರಾಜೇಂದ್ರ ಮುರಗುಡೆ-23, ಪ್ರಥ್ವಿ ಬಸವರಾಜ ಖೋತ- 23, ಉದಯ ಮಹಾರುದ್ರ ಗಣಾಚಾರಿ-19 ಬಂಧಿತರಾಗಿದ್ದಾರೆ.