This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಫೆಬ್ರವರಿ 3 ರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ನಟ ಅನಂತ ನಾಗ್‌ ಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2021ಪ್ರದಾನ

Join The Telegram Join The WhatsApp

ಹೊನ್ನಾವರ: 

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆಬ್ರವರಿ 3 ರಿಂದ 7 ರ ತನಕ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕರ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ನಾಟ್ಯೋತ್ಸವದ ಮೊದಲ ದಿನ ಫೆಬ್ರವರಿ 3 ರಂದು ಸಂಜೆ 4.30 ಗಂಟೆಗೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ವಿ. ಸುನೀಲಕುಮಾರ ಉದ್ಘಾಟಿಸಲಿದ್ದಾರೆ. ಖ್ಯಾತ ಕನ್ನಡ ಸಿನೆಮಾ ನಟ ಅನಂತ ನಾಗ್ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡುವರು. ಮಂಡಳಿ ವತಿಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಲಾವಿದ ಡಾ.ಎಂ. ಪ್ರಭಾಕರ ಜೋಶಿ ಇವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ.

ನಟ ಅನಂತ ಭಟ್ಟ ಹುಳಗೋಳ, ಬರಹಗಾರ ಎಂ.ಕೆ. ಭಾಸ್ಕರ ರಾವ್, ಶಾಸಕ ಸುನೀಲ ನಾಯ್ಕ, ಪತ್ರಕರ್ತ ಬಿ. ಗಣಪತಿ, ಉಡುಪಿಯ ಶಾಸಕ ರಘುಪತಿ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ, ಕೊಡಗಿ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬರಹಗಾರ ರೋಹಿತ್ ಚಕ್ರತೀರ್ಥ, ಸಾಂಸ್ಕೃತಿಕ ಚಿಂತಕ ನಾರಾಯಣ ಯಾಜಿ, ಮಾಜಿ ಶಾಸಕ ಮಂಕಾಳ ವೈದ್ಯ, ಸಾಹಿತಿ ರೋಹಿದಾಸ ಮತ್ತಿತರರು ಐದು ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಯಕ್ಷರಂಗ ಮಾಸಪತ್ರಿಕೆ, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮತ್ತಿತರರಿಗೆ ಸನ್ಮಾನ, ವೆಂಕಟ್ರಮಣ ಹೆಗಡೆ ಅವರಿಗೆ ಶ್ರೀಮಯ ಕಲಾ ಪೋಷಕ ಪ್ರಶಸ್ತಿ ಪ್ರದಾನ, ಗುಣವಂತೆಯ ಭಂಡಾರಿ ಮಿತ್ರವೃಂದದವರಿಂದ ಪಂಚವಾದ್ಯ ಸಮ್ಮೇಳ- ಮಂಗಳವಾದ್ಯ, ಕೇರಳ ತಂಡದ ಕಿರಾತಾರ್ಜುನೀಯ ಕಥಕ್ಕಳಿ, ಓಡಿಸ್ಸಿ ನೃತ್ಯ, ಲಯ ಲಾವಣ್ಯ, ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ, ನಾಟಕ, ಗಝಲ್ ಗಾಯನ, ನಾಟ್ಯ ಪ್ರಕಾರದ ರೂಪಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಾನ್ಸುರಿ ವಾದನ, ತಬಲ ವಾದನ, ಶಾಲಾ ಮಕ್ಕಳಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಲ್ಲಿ ನಡೆಯಲಿವೆ. ಫೆಬ್ರವರಿ 7 ರಂದು ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.


Join The Telegram Join The WhatsApp
Admin
the authorAdmin

Leave a Reply