
ಆರ್ಡಿ: ಕೆರ್ಜಾಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದಲ್ಲಿ ಮೇ 8 ನೇ ಗುರುವಾರ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಪ್ರಾರ್ಥನೆ, ಗುರುಗಣಪತಿ ಪೂಜೆ,ಪುಣ್ಯಾಹವಾಚನ, ನವಕ ಪ್ರಧಾನ ಹೋಮ,ಚಂಡಿಕಾಹೋಮ,ಗಂ.1:30 ಕ್ಕೆ
ಪಂಚಾಮೃತ ಸಹಿತ ಕಲಶಾಭಿಷೇಕ, ಗಂ 12 ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ, ,ತೀರ್ಥಪ್ರಸಾದ, ಗಂ 12:30 ಕ್ಕೆ ಅನ್ನಪ್ರಸಾದ, ಸಂಜೆ ಗಂ.6 ರಿಂದ
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆರ್ಡಿ.ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.)ಕೊಂಜಾಡಿ, ಶ್ರೀಜಲದುರ್ಗಾ ಭಜನಾ ಮಂಡಳಿ
ಶೇಡಿಮನೆ ಭಜನಾ ತಂಡಗಳಿಂದ ಕುಣಿತ ಭಜನಾ ಮಹೋತ್ಸವ,ರಾತ್ರಿ ಗಂ 9:30 ಕ್ಕೆ
ರಂಗಪೂಜೆ, ಸಂದರ್ಶನ, ಸುತ್ತು ಬಲಿ, ಪ್ರಸಾದ ವಿತರಣೆ, ರಾತ್ರಿ ಗಂ 9:30 ಕ್ಕೆ ಅನ್ನಪ್ರಸಾದ, 2023 ನೇ ಸಾಲಿನಲ್ಲಿ
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾರಂಪರಿಕ ನಾಟಿ ವೈದ್ಯ ಭೋಜ ನಾಯ್ಕ ಕರ್ಪಾಡಿ ಶೇಡಿಮನೆ ಇವರಿಗೆ ತಂತ್ರಿ ಗಿರೀಶ್ ಸೋಮಾಯಾಜಿ ಪಡುವಳ್ಳಿಯವರು ದೇವಳದ
ವತಿಯಿಂದ ಶ್ರೀದುರ್ಗಾ ಅನುಗ್ರಹ ಸನ್ಮಾನ ಪತ್ರದೊಂದಿಗೆ ಗೌರವಾರ್ಪಣೆ,.ಗಂ.11 ರಿಂದ ಕಲ್ಲುಕುಟಿಗ ಮತ್ತು
ಸತ್ಯದೇವತೆಗೆ ಸಿರಿ ಸಿಂಗಾರ ಕೋಲಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯತಿರಾಜ್ ಶೆಟ್ಟಿ ಜಗ್ಲುಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.