ಬೆಳಗಾವಿ : ಮದುವೆಯ ಫೋಟೋಗ್ರಾಫರ್ ಆಗಿ ಬಂದಿದ್ದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಉಮೇಶ ಹಲ್ಲೆಗೊಳಗಾದ ಫೋಟೋಗ್ರಾಫರ್. ಬೈಲಹೊಂಗಲದ ಉಮೇಶ್, ನಾಲ್ಕು ದಿನಗಳ ಹಿಂದೆ ಬೆಳಗಾವಿ ಕೆಪಿಟಿಸಿಎಲ್ ಕಲ್ಯಾಣ ಮಂಟಪಕ್ಕೆ ಮದುವೆ ಆರ್ಡರ್ ಇದೆ ಎಂದು ಫೋಟೋಗ್ರಾಫರ್ ಆಗಿ ಬಂದಿದ್ದಾರೆ. ಆಗ ನಾಲ್ವರು ಉಮೇಶ ನನ್ನು ಅಪಹರಿಸಿ ಕಾರಲ್ಲಿ ಕರೆದೊಯ್ದಿದ್ದರು.

ರಾಡ್ ನಿಂದ ಹೊಡೆದು, ಬೈಲಹೊಂಗಲ ತಾಲೂಕಿನ ಚವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ಬಿಟ್ಟು ಹೋಗಿದ್ದರು.
ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ.