Join The Telegram | Join The WhatsApp |
ಬೆಳಗಾವಿ :
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರದ ಬೆಂಬಲದೊಂದಿಗೆ ರಾಷ್ಟ್ರೀಯ ಏಕೀಕರಣ ಶಿಬಿರವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಆವರಣದಲ್ಲಿ “ಏಕೀಕರಣದ ಮೂಲಕ ಸುಸ್ಥಿರ ಅಭಿವೃದ್ದಿಯ ಕಡೆಗೆ ಸಣ್ಣ ಬದಲಾವಣೆಗಳು” ಎಂಬ ಶೀರ್ಷಿಕೆಯೊಂದಿಗೆ ಮಂಗಳವಾರ ಉದ್ಘಾಟಿಸಲಾಯಿತು.
ಏಳು ದಿನಗಳ ಕಾಲ ಜರುಗಲಿರುವ ಈ ಶಿಬಿರದಲ್ಲಿ ಆರು ರಾಜ್ಯಗಳಿಂದ ಒಟ್ಟು 150 ಎನ್.ಎಸ್.ಎಸ್. ಸ್ವಯಂ ಸೇವಕರು ಪಾಲ್ಗೊಳಲ್ಲಿದ್ದು ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸಂಸದೆ ಮಂಗಳಾ ಅಂಗಡಿ ಶಿಬಿರವನ್ನು ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿ ಡಾ.ನಿತಿನ್ ಗಂಗನೆ ಅಧ್ಯಕ್ಷೀಯ ಬಾಷಣದಲ್ಲಿ ವಿದ್ಯಾರ್ಥಿಗಳು ಸುಸ್ಥಿರ ಅಭಿವೃದ್ದಿ ಬಗ್ಗೆ ಕಲಿತು ತಮ್ಮ ಸಂಸ್ಥೆಗಳಲ್ಲಿ ಮತ್ತು ಪ್ರದೇಶಗಲ್ಲಿ ಅಳವಡಿಸಬೇಕೆಂದು ತಿಳಿಸಿದರು.
ಕುಲಪತಿ ಡಾ.ಎನ್. ಎಸ್. ಮಹಾಂತಶೆಟ್ಟಿ, ಎನ್.ಎಸ್.ಎಸ್. ಧ್ಯೇಯ ವಾಕ್ಯ ‘ನನಗಲ್ಲ ನಿನಗೆ’ ಅರಿತುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕುಲಸಚಿವ ಡಾ. ವಿ.ಎ.ಕೋಠಿವಾಲೆ ಸ್ವಾಗತಿಸಿದರು. ಡಾ.ಅಶ್ವಿನಿ ನರಸನ್ನವರ ಪರಿಚಯಿಸಿದರು. ಕೆ.ಎಲ್.ಇ. ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ನಮ್ರತಾ ದೇವುಲಕರ ವಂದಿಸಿದರು.
Join The Telegram | Join The WhatsApp |