*ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ದ ಕೊಡಿ ಹಬ್ಬ* ವಿಶ್ವ ಪ್ರಸಿದ್ಧ.ಇದು ವಿಶ್ವ ಪ್ರಸಿದ್ಧ ಆಗಲು ಬಹು ಮುಖ್ಯ ಕಾರಣ ಕೋಟಿ ಗೆ ಒಂದು ಲಿಂಗ ಕಡಿಮೆ *ಹಾಗಾಗಿ ಅಜರಾಮರ ಶಿವನ ಲಿಂಗ ನೋಡುವುದೇ ಒಂದು ಮೈ ರೋಮಾಂಚನ ಹಾಗಾಗಿ* ವಿಶ್ವದ ವಿಶೇಷ ಶಿವಲಿಂಗಗಳಲ್ಲಿ ಕೋಟೇಶ್ವರ ದ ಶಿವಲಿಂಗ ವಿಶ್ವ ಪ್ರಸಿದ್ಧ.
ಕೋಟೇಶ್ವರ ಸುತ್ತ ಮುತ್ತಲಿನ ಹತ್ತು ಗ್ರಾಮಗಳು ಈ ಕೋಟೇಶ್ವರ ಹಬ್ಬದ ಪೂರ್ವ ತಯಾರಿ ಮಾಡುತ್ತದೆ.ಪೂರ್ವ ತಯಾರಿ ಎಂದರೆ ಕೇವಲ ಒಂದು ವಾರಗಳಲ್ಲಿ ತಯಾರಾಗುವುದಲ್ಲ ಸುಮಾರು ಮೂರು ತಿಂಗಳ ಹಿಂದಿನಂದ *ಸಾಂಪ್ರದಾಯಿಕ ಸಂಪ್ರದಾಯಗಳು ಪ್ರಾರಂಭ ಗೊಂಡು ಸರಿ ಸುಮಾರು ಮೂರು ತಿಂಗಳ ಮುಂಚಿತ ಮತ್ತು ಕೊಡಿ ಹಬ್ಬ ಮುಗಿದ ಮೂರು* ತಿಂಗಳ ನಂತರ ವೂ ಕೂಡ ಭಕ್ತರ ಹೃದಯದಲ್ಲಿ ಸದಾ ಹಚ್ಚ ಹಸಿರಾಗಿರುವ ಶಿವನ ಭಕ್ತಿ ಜ್ಞಾನ ಪರಂಪರೆಯ ಇತಿಹಾಸದ ಪುಟಗಳಲ್ಲಿ ಅಮರವಾಗಿರುವ ಹಬ್ಬ! ಇಲ್ಲಿ ನಡೆಯುವ ಪೂಜೆ ಪುರಸ್ಕಾರ ಹಿಡಿದು ಭಕ್ತರ ಬೇಡಿಕೆಗಳಿಗೆ ಸಿಗುವ ಅನುಗ್ರಹದ ಮಹತ್ವ ಜಗದ್ವಿಖ್ಯಾತ!
*ನಾವು ಬೇಡಿಕೊಳ್ಳಬಹುದಾದ ಎಲ್ಲಾ ಬೇಡಿಕೆಗಳು ಸಿದ್ಧಿ ಆಗುತ್ತದೆ.ಹೊಸದಾಗಿ ಮದುವೆ* ಆದ ದಂಪತಿಗಳು ಇಲ್ಲಿ ಸಾಂಪ್ರದಾಯಿಕ ಆಗಿ ನೀಡಲ್ಪಡುವ ಕಬ್ಬಿನ ಕೊಡಿ ಪಡೆಯಲೇ ಬೇಕು ಮತ್ತು ಆ ಮೂಲಕ ಶ್ರೀ ಶಿವನ ಲಿಂಗ ದರುಶನ ಪಡೆದಾಗ ಅವರ ಜೀವನ ಪೂರ್ತಿ *ಆರೋಗ್ಯ! ನೆಮ್ಮದಿ! ಆರ್ಥಿಕ! ಸಂಪನ್ನತೆ ಯಿಂದ ಸಂಪನ್ನರಾಗುತ್ತಾರೆ ಎಂಬುವುದು* ಬಲವಾದ ನಂಬಿಕೆಯ ಪ್ರತೀತೀ! ಯಾವುದೇ ವ್ಯವಹಾರಗಳ ಪ್ರಾರಂಭ ಮತ್ತು ನಷ್ಟ ಗಳು ಅನುಭವಿಸಿದಾಗ ಈ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಅದು ನಿಜವಾದ ಅರ್ಥದಲ್ಲಿ ದಡ ಸೇರಿ ಶ್ರೇಯಸ್ಸು ಕೀರ್ತಿ ಯನ್ನು ತಂದು ಕೊಡುತ್ತದೆ.
ಇಲ್ಲಿ ಯಾವುದೇ ಜಾತಿ ಮತ ಪಂಥ ಎಂಬುವುದನ್ನು ತೊರೆದು ಭಯ ಭಕ್ತಿಯಿಂದ ಶ್ರದ್ಧೆಯಿಂದ ಸೇರಬೇಕೆಂಬುದು ಲೋಕೋಕ್ತಿ! *ಅದನ್ನು ಮೀರಿ ನಡೆದರೆ ಅಷ್ಟೇ ನೋವು ಅನುಭವಿಸಲೇ ಬೇಕಾಗುತ್ತದೆ.ಇಲ್ಲಿನ ರಥದ ಎತ್ತರ ನೋಡಿದಾಗ* ಎಂತಹವರ ಹೃದಯಕ್ಕೂ ಹತ್ತಿರ ಆಗಿ ಆ ರಥ ಬ್ರಹ್ಮಲಿಂಗೇಶ್ವರ ಏರಿ ಬರುವ ದಿಗ್ವಿಜಯ ದ ರಥ ಎಂಬಂತೆ ಭಾಸವಾಗುತ್ತದೆ.ಶ್ರೀ ಬ್ರಹ್ಮ ಲಿಂಗೇಶ್ವರ ನ ಸನ್ನಿಧಾನದಲ್ಲಿ ಶ್ರೀ ಬ್ರಹ್ಮ ರಥ ಹತ್ತೂರ ಭಕ್ತರ ಜೊತೆ ದೇಶ ವಿದೇಶಗಳಲ್ಲಿ ಭಯ ಭಕ್ತಿಯಿಂದ ಶ್ರದ್ಧೆಯಿಂದ ನೋಡುವ ಭಕ್ತರ ಪಾಲಿಗೆ ಹೃದಯದ
ಭಾವ! ಸ್ನೇಹ! ಸಂತೋಷ! ಇಷ್ಟಾರ್ಥ ಈಡೇರಿಸುವ ಶ್ರೀ ಬ್ರಹ್ಮ ರಥವೂ ಹೌದು! ಶ್ರೀ ಶಿವನು ಬ್ರಹ್ಮ ನ *ದೇಹದೊಳಗೆ ಪರಕಾಯ ಪ್ರವೇಶ ಮಾಡಿ ದ ಎಂಬಾ ಲೋಕೋಕ್ತಿ ಗೆ ಸರಿ* ಸಮಾನ ಭಾವನೆಗಳಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ರಥವೂ ರಥ ಬೀದಿಯಲ್ಲಿ ಪೂರ್ಣ ಚಂದಿರನ ಕಂಗೊಳಿಸುವ ಪುಣ್ಯ ಸಮಯದಲ್ಲಿ ಶುಭ ಮುಂಜಾನೆ ಶ್ರೀ ಬ್ರಹ್ಮ ರಥದಲ್ಲಿ ಅಮರನಾಗಿ ಪೂಜೆ ಪುರಸ್ಕಾರ ತಾಳ ಮದ್ದಳೆ ತಂಬೂರಿ ನೀನಾದಗಳೊಂದಿಗೆ ಅಜರಾಮನಾಗಿ ತಾತ್ಕಾಲಿಕ ಗರ್ಭ ಗುಡಿಯಿಂದ ಹೊರ ಬಂದು ರಥವನ್ನೇರಿ ಭವ್ಯ ಸುಂದರ ರಥಬೀದಿಯಲ್ಲಿ ಮುಂಜಾನೆ ಪೂರ್ವ ದಿಂದ ಸೂರ್ಯ ನ ಬೆಳಕು ತಲೆಯ ಮೇಲೇರಿ ಪಶ್ಚಿಮ ದಿಕ್ಕಿನ ಕಡೆಗೆ ಸಾಗುವ ನಡುವೆ ದೇವಸ್ಥಾನದ *ಮುಂಭಾಗದಲ್ಲಿ ಪಶ್ಚಿಮ ದಿಂದ ಪೂರ್ವದ ಕಡೆ ಇತ್ತಿಂದತ್ತ ಹೋಗಿ ಬಹಳ* ಉತ್ತಮವಾಗಿ ಭಗದ್ ಭಕ್ತರಿಗೆ ದರುಶನ ನೀಡುತ್ತಾ ಸಂಜೆ ಸೂರ್ಯ ನ ಹೊಂಗಿರಣ ಪಶ್ಚಿಮ ದಿಂದ ಪೂರ್ವದೆಡೆಗೆ ಬೆಳಕು ಚೆಲ್ಲುತ್ತಾ ಶ್ರೀ ಬ್ರಹ್ಮ ಲಿಂಗೇಶ್ವರ ನ ರಥದ ಕಡೆ ಪ ಸ ರಿ ಸುತ್ತಿದ್ದರೆ ಇತ್ತ ಪೂರ್ವದಿಂದ ಪಶ್ಚಿಮಕ್ಕೆ ಶ್ರೀ ಭಗದ್ಭಕ್ತರು ಏಕ ಕಾಲಕ್ಕೆ ಶಿವ ನಾಮವ ಮನದೀ ಜಪಿಸಿ ರಥವನ್ನು ಎಳೆದು ತ ರು ತ್ತಿದ್ದರೆ ಲಕ್ಷಾಂತರ ಭಕ್ತರ ಸಮಾಗಮ ಕ್ಕೆ ಶ್ರೀ ಕ್ಷೇತ್ರ *ಕೋಟಿಲಿಂಗೇಶ್ವರ ಅನುಗ್ರಹಿಸುತ್ತಾನೆ.ಯಾರು ಈಶ್ವರ ನ ನೆನಪಿನಲ್ಲಿ ಭಯ ಭಕ್ತಿ ಯಿಂದ ಶಿವ ನಾಮ ಜಪಿಸಿ ಈ ಕೋಟೇಶ್ವರ ನ ರಥೋತ್ಸವ ವನ್ನು ಕ ಣ್ತುಂ ಬಿಸಿ ಕೊಳ್ಳುತ್ತಾರೋ ಅವರಿಗೆ ಜೀವನ ಪೂರ್ತಿ ಸಂತೋಷ! ಸಂಭ್ರಮ!ಸಡಗರ! ಆರ್ಥಿಕ ಸಾಮಾಜಿಕ ಆರೋಗ್ಯ* ಗಳಲ್ಲಿ ನಿಜವಾದ ಯಶಸ್ಸನ್ನು ಪಡೆಯುತ್ತಾರೆ.ಭಾರತ ದೇಶದ ಇತಿಹಾಸದಲ್ಲಿ ಸುಂದರವಾದ ಇತಿಹಾಸದಲ್ಲಿ ಶ್ರೀ ಶಿವನ ಪುಣ್ಯ ಕ್ಷೇತ್ರಗಳನ್ನು ನೆನಪಿಸಿ ಕೊಳ್ಳಬಹುದಾದ ನೋಡಬಹುದಾದ! ದರ್ಶಿಸ ಬಹುದಾದ! ಉತ್ತಮ ಕ್ಷೇತ್ರಗಳಲ್ಲಿ ಶ್ರೀ ಕೋಟೇಶ್ವರ ದ ಶ್ರೀ ಕೋಟಿಲಿಂಗೇಶ್ವರ ದೇವರು ಕೂಡ ಒಂದು.ದೇಶ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ವರ್ಷಪೂರ್ತಿ *ಕ್ಷೇತ್ರ ಕ್ಕೆ ಬಂದು ದರ್ಶನ ಮತ್ತು ಸೇವೆಯನ್ನು ನೀಡುತ್ತಾರೆ.ಶ್ರೀ ಕ್ಷೇತ್ರ ದ ಎರಡು ಸುಂದರ ದೃಶ್ಯ ಎಂದರೆ ಒಂದು* ದೇವಸ್ಥಾನ ದ ಉತ್ತರ ಭಾಗದಲ್ಲಿರುವ ಅತ್ಯಂತ ದೊಡ್ಡದಾದ ಕೆರೆ ಮತ್ತು ದೇವಸ್ಥಾನದ ಒಳ ಭಾಗದಲ್ಲಿ ಅಮರ ವಾದ ಶಿಲಾ ಜೋಡಿಸಿ ನಿರ್ಮಿತವಾದ ಹೊರ ಮತ್ತು ಒಳ ಪೌಳಿಗಳು! ಇವೆರಡನ್ನೂ ನಿಜವಾಗಿ ವಿಮರ್ಶೆ ಮಾಡಿದರೆ ಸಾವಿರಾರು ವರ್ಷಗಳ ಇತಿಹಾಸ ವನ್ನು ಹೇಳುತ್ತದೆ.ಕೋಟೇಶ್ವರ ಜಾತ್ರೆಗೆ ರಾಜ್ಯಾದ್ಯಂತ ನೂರಾರು ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ನಡೆಸಲು ಕ್ಷೇತ್ರದಲ್ಲಿ ಶ್ರೀ ಬ್ರಹ್ಮ ರಥೋತ್ಸವದ ಅಂಗವಾಗಿ *ಆಗಮಿಸುತ್ತಾರೆ.ಬಹಳ ಸಂತೋಷ ಮತ್ತು ಲವಲವಿಕೆಯಿಂದ ವ್ಯಾಪಾರ ವಹಿವಾಟು ನಡೆಸಿ ಶ್ರೀ ಕೋಟೇಶ್ವರ* ದ ಶ್ರೀ ಕೋಟಿಲಿಂಗೇಶ್ವರ ನಿಗೆ ಹೊಸ ಆಕರ್ಷಣೆಯನ್ನು ನೀಡುತ್ತಾರೆ.ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ!ಕೇವಲ ಇಷ್ಟೇ ಅಲ್ಲ ಕೋಟೇಶ್ವರ ಪರಿಸರದ ಅನೇಕ ಸಂಘಸಂಸ್ಥೆಗಳು ಬಹಳ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಸುಮಾರು *ಒಂದು ವಾರಗಳ ಕಾಲ ಅಲ್ಲೇ ಅಕ್ಕಪಕ್ಕದಲ್ಲಿ ಆಯೋಜಿಸಿ ಇಡೀ ಜಗತ್ತಿಗೆ ಒಂದು ಉತ್ತಮ ಗುಣಮಟ್ಟದ* ಮೌಲ್ಯ ಯುತ ವಾದ ಅಧ್ಯಾತ್ಮ ದ ಸಂದೇಶ ಮತ್ತು ಕಂಪನಗಳನ್ನು ಹರಡಿ ಒಂದು ವರುಷ ಮಾಸುವ ಮುನ್ನವೇ ಮತ್ತೆ ಮತ್ತೆ ಬಂದಾಯ್ತು ಎಂಬಷ್ಟರ ಮಟ್ಟಿಗೆ ಶ್ರೀ ಕೋಟಿಲಿಂಗೇಶ್ವರ ನ *ಶ್ರೀ ಬ್ರಹ್ಮ ರಥೋತ್ಸವ ನೆನಪಾಗುತ್ತಲೇ ಇರುತ್ತದೆ.*
ಎಸ್. ಸತೀಶ್ ಕುಮಾರ್ ಕೋಟೇಶ್ವರ, ಸಂಪಾದಕರು- ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ