This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

Sports News

ಕೊಹ್ಲಿ ಅಜೇಯ 166, ಭಾರತ 390 !

Join The Telegram Join The WhatsApp

ತಿರುವನಂತಪುರ :

ಭಾರತ ಕ್ರಿಕೆಟ್ ತಂಡ ಇಂದು ಪ್ರವಾಸಿ ಶ್ರೀಲಂಕಾ ಎದುರು ಬೃಹತ್ ರನ್ ಗಳಿಸಿದೆ. ಈ ಮೂಲಕ ಶ್ರೀಲಂಕಾಕ್ಕೆ ಕೊನೆಯ ಏಕದಿನದಲ್ಲಿ ದೊಡ್ಡ ಸವಾಲು ಒಡ್ಡಿದೆ.ಭಾರತೀಯ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು ಮತ್ತೆ ಆಕರ್ಷಕ ಬ್ಯಾಟಿಂಗ್ ನಡೆಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದಾರೆ. ಶುಭಮನ್ ಗಿಲ್ ಅವರು ಸಹ ಶತಕ ಸಿಡಿಸಿದ್ದು 116 ಬಾರಿಸಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತಗಳಲ್ಲಿ ಐದು ವಿಕೆಟ್ ಕಳೆದುಕೊಂಡು 390 ರನ್ ಗಳಿಸಿದೆ.

ವಿರಾಟ್ ಕೊಹ್ಲಿ ಏಕದಿನದಲ್ಲಿ 46ನೇ ಶತಕ ಬಾರಿಸಿದ್ದು ಇನ್ನು ಮೂರು ಶತಕ ಸಿಡಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.ಮಾಜಿ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ 34 ವರ್ಷದ ವಿರಾಟ್‌ ಕೊಹ್ಲಿ ಅವರು ಭಾನುವಾರ 166 (110) ರನ್‌ ಸಿಡಿಸಿದರು. ಭಾರತದಲ್ಲಿ ವಿರಾಟ್‌ ಕೊಹ್ಲಿ ಅವರ 21ನೇ ಏಕದಿನ ಶತಕವಿದು. ಈ ಮೂಲಕ ಅವರು ತವರಿನಲ್ಲಿ 20 ಏಕದಿನ ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.

ಇಂದು ದಾಖಲಾದ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಒಟ್ಟು ಶತಕಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಸಚಿನ್ ತೆಂಡೂಲ್ಕರ್ ಅವರು 49 ಶತಕಗಳನ್ನು ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟರ್‌ ಹಾಶೀಮ್‌ ಆಮ್ಲಾ ಅವರು ತವರು ನೆಲದಲ್ಲಿ 14 ಏಕದಿನ ಶತಕ ಗಳಿಸಿದ್ದಾರೆ.

ದಾಖಲೆಯತ್ತ ಕೊಹ್ಲಿ !

ವಿರಾಟ ಕೊಹ್ಲಿ ಮತ್ತೊಂದು ದೊಡ್ಡ ಶತಕ ಸಿಡಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದ ಕೊಹ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೊಹ್ಲಿ , ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಿಡಿದೆದ್ದಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದು , ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ( 12,651 ) ಗಳಿಸಿದ 5 ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ 18,426 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ (14,234 ), ರಿಕಿ ಪಾಂಟಿಂಗ್ ( 13,704 ) ಮತ್ತು ಸನತ್ ಜಯಸೂರ್ಯ ( 13,430 ) ನಂತರದ ಸ್ಥಾನಗಳಲ್ಲಿದ್ದಾರೆ.


Join The Telegram Join The WhatsApp
Admin
the authorAdmin

Leave a Reply