ಆವತ್ತು ಮೇ 10 ಇರಬೇಕು.‌ ಡೆಲ್ಲಿಗೆ ಹೋಗಬೇಕಾದ ಶುಭಾವಸರದಲ್ಲಿ ಗುರುವಣ್ಣ (ಬೈಂದೂರು ಶಾಸಕ) ಬೆಂಗಳೂರಿಗೆ ಬಂದಿದ್ದರು. ದಿನಗಳ ಹಿಂದಷ್ಟೇ ಎಲೆಕ್ಷನ್ ಮುಗಿದಿತ್ತು. ಎರಡು ತಿಂಗಳಿನ ಬಹುದೊಡ್ಡ ಶ್ರಮದ ಫಲ ಮತಪೆಟ್ಟಿಗೆ ಸೇರಿತ್ತು. ಅಂದರೆ ಬೈಂದೂರಿನ 246 ಬೂತ್‌ ಅಧ್ಯಕ್ಷರ ಮನೆ ಬಾಗಿಲಿಗೆ ಖುದ್ದು ಗುರುವಣ್ಣನೇ ಹೋಗಿ ಬಂದಿದ್ದರು. ಆದರೂ ಅವರನ್ನು ದಣಿವು ಆವರಿಸಿರಲಿಲ್ಲ, ಅಂದರೆ ಗುರುವಣ್ಣ ವಿಶ್ರಾಂತಿಯ ಮೂಡಿಗೆ ಇನ್ನೂ ಬಂದಿರಲಿಲ್ಲ‌. ‘ಬಾ ಇಲ್ಲೆ ಹತ್ತಿರ ಹೋಗಿ ಬರೋಣ ಎಂದು ನಮ್ಮನ್ನು ಬೆಂಗಳೂರಿನ ಕಾರ್ಪೋರೇಶನ್ ಸರ್ಕಲಿಗೆ ಕರೆತಂದಿದ್ದರು. ಒಂದು ವಿಭಿನ್ನ ಪ್ರಪಂಚವನ್ನು ಸೃಷ್ಟಿಸಿ ಇಡಲಾಗಿತ್ತು ಎನ್ನುವಂತಿದ್ದ ಆ ವಿಶಾಲ ಜಗತ್ತಿಗೆ ಗುರುವಣ್ಣ ಅದೇ ಬಿಳಿ ಪಂಚೆ, ಬಿಳಿ ಅಂಗಿಯಲ್ಲಿ ಎಂಟ್ರಿ ಕೊಡುತ್ತಿದ್ದರು. ನಮಗೆಲ್ಲ ಲೈಟಾಗಿ ಹಸಿವು ಆರಂಭವಾಗಿತ್ತು, ಬೆಳಿಗ್ಗೆ ಗಂಜಿ ತಿಂದು ಹೊರಟರೆ, ಗುರುವಣ್ಣನದು ಮತ್ತೆ ಊಟವಿಲ್ಲ, ಆದರ ನಮ್ಮಗಳ ಹೊಟ್ಟೆ ಕೇಳಬೇಕಲ್ಲ. ಆದರೆ ಆ ಮೀಟಿಂಗ್ ರೂಮಿನಲ್ಲಿ ಗುರುವಣ್ಣನ ಯೋಜನೆಗಳು ಹರಡಿಕೊಳ್ಳಲು ಆರಂಭಿಸಿದರು. ಅದನ್ನು ಕೇಳುತ್ತಿದ್ದಂತೆ ನಾವೆಲ್ಲ ಅಕ್ಷರಶಃ ಸ್ಟನ್! ಅಲ್ಲಿ ಮತ್ತೊಂದು ಮಜಲನ್ನು ತೆರೆದುಕೊಂಡ ವಿಷಯ – ಕೊಲ್ಲೂರು ಕಾರಿಡಾರ್!

ಗುರುವಣ್ಣನ ಯಾವ ಯೋಚನೆಗಳೂ ಕೇವಲ ಚುನಾವಣೆಯ ಆಶ್ವಾಸನೆಗೆ ಸೀಮಿತ ಆಗಿರುವುದಿಲ್ಲ. ಆಳ ಅಧ್ಯಯನ, ಯೋಚನೆ, ವಿವೇಚನೆಯ ನಂತರವೇ ಪ್ರಕಟಗೊಳ್ಳುತ್ತವೆ. ಅದೇ ಕಾರಣಕ್ಕೆ ಕೊಲ್ಲೂರು ಕಾರಿಡಾರ್ ಅದು ಚುನಾವಣೆಯ strategy ಅಲ್ಲಾ, ಅದು ಎಲ್ಲಾ ಬೈಂದೂರಿನ ಬೂತ್ ಬೂತ್‌ಗಳಲ್ಲೂ ಕೈಗೊಂಡ ಪ್ರತಿಜ್ಞೆ!. ಹಾಗಾಗಿ ಎಲೆಕ್ಷನ್ ಮುಗಿಯುತ್ತಲೆ ಬಿವೈ ರಾಘವೇಂದ್ರರ ಗೆಲುವೆಂತೂ ಖಾತ್ರಿಯಾಗಿತ್ತು. ಶೀಘ್ರವಾಗಿ ಸಂಸದರ ಮೂಲಕ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೊಲ್ಲೂರು ಕಾರಿಡಾರ್ ಎಂದರೆ ಏನು ಎನ್ನುವುದನ್ನು ವಿವರಿಸುವ ಸಿದ್ದತೆಯಲ್ಲಿ ಗುರುವಣ್ಣ ಇದ್ದರು. ಅಸಲಿಗೆ ಕೊಲ್ಲೂರು ಕಾರಿಡಾರ್ ಎಂದರೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರ ಅಲ್ಲಾ. ಅನೇಕರು ಅದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ನಮ್ಮ ಬೈಂದೂರು ಅಭಿವೃದ್ಧಿಗೆ ವಿಪುಲ ಅವಕಾಶಗಳ ತವರೂರು. ಆದರೆ ರಸ್ತೆ ಮಾಡುವುದೇ ಅಭಿವೃದ್ಧಿ ಎಂದುಕೊಂಡು ಈ ತನಕ ನಾವು ನೈಜ ಅಭಿವೃದ್ಧಿಯಲ್ಲಿ ಹಿಂದುಳಿದೆವು. ನಮ್ಮದೇ ಕ್ಷೇತ್ರದ ವಾರಾಹಿಯಲ್ಲಿ ಕೋಟ್ಯಂತರ ರೂಪಾಯಿ ಆದಾಯ ಇದ್ದರೂ ಸಿದ್ಧಾಪುರ ಭಾಗಕ್ಕೆ ಆದ ಉಪಯೋಗ ಕಡಿಮೆ. ನಮ್ಮದೇ ಕ್ಷೇತ್ರದ ಕೊಲ್ಲೂರಿನಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ ಆದರೆ ಗಂಗೊಳ್ಳಿಯಿಂದ ಕುಂದಾಪ್ರ ಹೋಗುವ ಶೀಘ್ರ ಸಂಪರ್ಕ ಸೇತುವೆ ನಿರ್ಮಾಣ ಇಂದಿಗೂ ನಮ್ಮಿಂದ ಸಾಧ್ಯವಾಗಲಿಲ್ಲ. ಬೈಂದೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಬ್ಬಿಕೊಂಡಿರುವ ಸುಂದರವಾದ ಬೀಚ್‌ಗಳು, ದೇವಸ್ಥಾನಗಳು, ಮಲೆನಾಡು, ಹಿನ್ನೀರು, ವಿಮಾನ ನಿಲ್ದಾಣ, ರೈಲ್ವೆ ಮೇಲ್ದರ್ಜೆಗೆ, ಪ್ರಾಧಿಕಾರ, ಹೀಗೆ ಅಭೂತಪೂರ್ವ ಅವಕಾಶಗಳು ಇವೆ. ಅದೆಲ್ಲವನ್ನು ಸದ್ವಿನಿಯೋಗಪಡಿಸಿಕೊಂಡು ಬೈಂದೂರನ್ನು ಅಭಿವೃದ್ಧಿಯ ಶಿಖರಕ್ಕೆ ಏರಿಸುವ ಶಾಸಕ ಗುರುವಣ್ಣ ದೂರದೃಷ್ಟಿ ನಮಗೆ ಪ್ರೇರಣೆ.‌

ಕೊಲ್ಲೂರು ಕಾರಿಡಾರ್ ಎಂದರೆ ಕೊಲ್ಲೂರು ದೇವಸ್ಥಾನದ ಆಸುಪಾಸು ಇದ್ದವರನ್ನು ಒಕ್ಕಲೆಬ್ಬಿಸಿ ಅಗಲೀಕರಣವೂ ಅಲ್ಲಾ, ಸಿಮೆಂಟಿಕರಣವೂ ಅಲ್ಲಾ… ಹಾಗೆಂದು ಹಬ್ಬಿಸುವ, ನಂಬಿಸುವವರ ಕುರಿತಾಗಿ ವಾಸ್ತವಗಳಷ್ಟೇ ಇದು. ಕೊಲ್ಲೂರು ಕಾರಿಡಾರ್ ಬೆಳವಣಿಗೆಗಳು ಮತ್ತು ಅದರ ಸ್ವರೂಪದ ಕುರಿತಾಗಿ ಸರಣಿ ಬರೆವಣಿಗೆ ಸವಿಸ್ತಾರವಾಗಿ ಮುಂದುವರಿಯಲಿದೆ‌. ಈ ಮಾಹಿತಿ ಎಲ್ಲರಿಗೂ ತಿಳಿಯುವಂತಾಗಲಿ.

(ಕೃಪೆ : ಅಂತರ್ಜಾಲ ತಾಣ)