
ಬಂಟ್ವಾಳ: ಈ ಹಿಂದೆ ವಿವಿಧ ಬೆಟ್ಟ ಮತ್ತು ಕೋಟೆಗಳನ್ನು ಬರಿಗಾಲಿನಲ್ಲಿ ಮೇಲೇರಿ ಕೋತಿರಾಜ್ ಎಂದೇ ಪ್ರಸಿದ್ದಿ ಗಳಿಸಿರುವ ಸಾಹಸಿ ಜ್ಯೋತಿರಾಜ್ ಭಾನುವಾರ ಇಲ್ಲಿನ ಕಾರಿಂಜ ಕ್ಷೇತ್ರದ ಬಂಡೆ ಮೇಲೇರಿದರು.
ಇಲ್ಲಿನ ರಥಬೀದಿ ರಸ್ತೆ ಬದಿ ಭಕ್ತರು ಸಾಲು ಸಾಲು ಮೆಟ್ಟುಲುಗಳನ್ನು ಏರಿ ಪಾರ್ವತಿ ದೇವಸ್ಥಾನ ದಾಟಿ ಶಿವನ ದೇವಾಲಯ ತಲುಪುವ ಮುನ್ನ ಬೃಹತ್ ಬಂಡೆ ಕಲ್ಲನ್ನು ಸರ ಸರನೆ ಏರಿದ ಜ್ಯೋತಿರಾಜ್ ಶಿವಾಲಯ ತಲುಪಿದ್ದರು.
ರಾಜ್ಯದ ವಿವಿಧೆಡೆ ಸಾಹಸ ಪ್ರದರ್ಶನ ನೀಡುವ ಮೂಲಕ ಬಂದ ಹಣವನ್ನು ಅವರ ಸ್ಪೋರ್ಟ್ಸ್ ಕ್ಲಬ್ ಮೂಲಕ ಬೀದಿ ಬದಿ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿರುವುದಾಗಿ ಅವರು ತಿಳಿಸಿದರು.