ಬೆಳಗಾವಿ: ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಮೆಣಸೆ ( 97) ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

1975ರಲ್ಲಿ ಮುಂಬೈಯಲ್ಲಿ ಅನ್ನಪೂರ್ಣ ಮಹಿಳಾ ಮಂಡಳ ಸ್ಥಾಪಿಸಿ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಶ್ರಮಿಸಿದರು. 1984ರಲ್ಲಿ ಬೆಳಗಾವಿ ಸಿಟಿ ಮಜದೂರ್ ಕೋ ಅಪ್ ಕ್ರೆಡಿಟ್ ಸೊಸೈಟಿ ಸ್ಥಾಪಿಸುವಲ್ಲಿ ದುಡಿದಿದ್ದರು.1988 ರಲ್ಲಿ ಪೂರ್ವಗಾಮಿ ಎಂಬ ಹೋರಾಟದ ಸಂಸ್ಥೆ ಸ್ಥಾಪನೆ ಮಾಡಿದ್ದರು. ಅವರು ಆರಂಭಿಸಿದ್ದ ಸಾಮ್ಯವಾದಿ ಎಂಬ ಮರಾಠಿ ಪತ್ರಿಕೆ ಇನ್ನೂ ಪ್ರಕಟವಾಗುತ್ತಿದೆ.
ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರದ ದಿನಗಳಲ್ಲಿ ಕಾರ್ಮಿಕ ಹೋರಾಟದಲ್ಲಿ ಗುರುತಿಸಿ ಸಿಪಿಐ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಘಟನೆಯಲ್ಲಿ ಭಾಗವಹಿಸಿದ್ದರು. ಮರಾಠಿ ಪತ್ರಕರ್ತ, ಸಾಹಿತಿಯಾಗಿದ್ದ ಅವರು ಗಡಿ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು.