ಹುಬ್ಬಳ್ಳಿ : 2024-25ನೇ ಶೈಕ್ಷಣಿಕ ಸಾಲಿನ ಬೆಸ ಸಮಿಸ್ಟಾರ್ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವು ಪ್ರಸ್ತುತವಾಗಿ ಚಾಲ್ತಿಯಲ್ಲಿದ್ದು ಸದರಿ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಪರೀಕ್ಷಾ ಫಲಿತಾಂಶವನ್ನು ಬೇಗನೇ ಪ್ರಕಟಿಸುವುದು ಅವಶ್ಯವಾಗಿರುತ್ತದೆ. ಈ ಸಂಬಂಧಿತವಾಗಿ ಅಧ್ಯಾಪಕರುಗಳು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವುದರಿಂದ ಉಲ್ಲೇಖಿತ 1 ರಲ್ಲಿಯ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ದಿನಾಂಕ: 19.02.2025 ರಿಂದ ಸಮ ಸೆಮಿಸ್ಟರಿನ ತರಗತಿಗಳನ್ನು ಪ್ರಾರಂಭಿಸುವುದು ಕಷ್ಟಸಾಧ್ಯವಾಗುತ್ತದೆ. ಆದುದರಿಂದ 3 ವರ್ಷ ಹಾಗೂ 5 ವರ್ಷದ ಕಾನೂನು ಪದವಿಯ ಸಮ ಸೆಮಿಸ್ಟರಿನ ತರಗತಿಗಳನ್ನು ದಿನಾಂಕ: 19.02.2025 ರ ಬದಲಾಗಿ ದಿನಾಂಕ: 03.03.2025 ರಿಂದ ಪ್ರಾರಂಭಿಸಲು ಈ ಮೂಲಕ ತಿಳಿಸಲಾಗಿದೆ.

ಸದರಿ ವಿಷಯವನ್ನು ಸಂಯೋಜಿತ ಮಹಾವಿದ್ಯಾಲಯದ ಪ್ರಾಂಶುಪಾಲರು, ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಗಮನಕ್ಕೆ ತರಬೇಕೆಂದು ಕುಲಸಚಿವರು, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.