Join The Telegram | Join The WhatsApp |
ಖಾನಾಪುರ :
ಇಲ್ಲಿಯ ಶಿವ ಸ್ಮಾರಕದಲ್ಲಿ ಪರಿತ್ (ಮಡಿವಾಳ) ಸಮಾಜ ಆಯೋಜಿಸಿದ್ದ ಸಂತ ಗಾಡಗೆ ಬಾಬಾ ಪುಣ್ಯತಿಥಿ ಮತ್ತು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಅವರನ್ನು ಮಹಿಳೆಯರು ಸನ್ಮಾನಿಸಿದರು.
ಡಾ.ಸೋನಾಲಿ ಅವರು ಶ್ರೀ ಸಂತ ಗಾಡಗೇ ಬಾಬಾರವರ ಅನುಕರಣೀಯ ಕಾರ್ಯದ ಕುರಿತು ಮಾತನಾಡಿ, ಸ್ವಚ್ಛ ಗ್ರಾಮಗಳಿಗಾಗಿ, ಮೂಢ ನಂಬಿಕೆಗಳ ವಿರುದ್ಧ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು ಎಂದು ಹೇಳಿದರು.
ಖಾನಾಪುರ ನಗರಾಧ್ಯಕ್ಷ ನಾರಾಯಣ ಮಾಯೇಕರ, ಪರಿತ ಸಮಾಜದ ಮುಖಂಡರಾದ ಸಂತೋಷ ಪರೀಟ್, ಲಕ್ಷ್ಮಣ ಪಾಳೇಕರ್, ನಾಗೇಶ ಮಡಿವಾಳ್, ಶ್ರೀಕಾಂತ ಶಿಂಧೆ, ಚಂದ್ರಭಾಗ ಪರಿತ್, ಅನಿತಾ ಕೋಮಸ್ಕರ್ ಉಪಸ್ಥಿತರಿದ್ದರು.
Join The Telegram | Join The WhatsApp |