Join The Telegram | Join The WhatsApp |
ಸುಬ್ರಹ್ಮಣ್ಯ :
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ನಡೆದ ಚಂಪಾಷಷ್ಠಿ ಸಂಧರ್ಭದಲ್ಲಿ ವ್ಯಾಪಾರಿ ಯುವಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಮಾನತಿನಲ್ಲಿರುವ ಪೊಲೀಸ್ ಪೇದೆ ಭೀಮಣ್ಣ ಮತ್ತೆ ಕಡಬ ಅಥವಾ ಪುತ್ತೂರು ತಾಲೂಕಿನ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಹಿಂಜಾವೇ ”ಪೊಲೀಸ್ ಪೇದೆ ಹಿಂದೂ ವ್ಯಾಪಾರಿಗೆ ವಿನಾಃ ಕಾರಣ ಹಲ್ಲೆ ನಡೆಸಿದ್ದು ದೌರ್ಜನ್ಯವೆಸಗಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಇತ್ಯರ್ಥವಾಗಬೇಕಿದೆ.
ಹಲ್ಲೆಗೊಳಗಾದ ವ್ಯಾಪಾರಿ ಯುವಕ
ಪ್ರಕರಣ ಇತ್ಯರ್ಥವಾಗುವವರೆಗೆ ಹಲ್ಲೆ ನಡೆಸಿದ್ದಾರೆನ್ನಲಾದ ಪೊಲೀಸ್ ಪೇದೆ ಭೀಮಣ್ಣ ಕಡಬ, ಪುತ್ತೂರು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಲು ಹಾಜರಾಗಬಾರದು. ಒಂದು ವೇಳೆ ಈ ತಾಲೂಕುಗಳಲ್ಲಿ ಕರ್ತವ್ಯಕ್ಕೆ ಹಾಜರಾದರೆ ಪೊಲೀಸರ ವಿರುದ್ಧ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು” ಎಂದು ತಿಳಿಸಿದೆ.
Join The Telegram | Join The WhatsApp |