ಬೆಳಗಾವಿ :
ಮಹಾರಾಷ್ಟ್ರ ಸರಕಾರದ ಮಹಾತ್ಮ ಪುಲೆ ಜನಾರೋಗ್ಯ ವಿಮೆ ಯೋಜನೆ ಜಾರಿಗೆ ಮಹಾರಾಷ್ಟ್ರ ಸರಕಾರ ಇದೀಗ ಬೆಳಗಾವಿಯಲ್ಲೇ ಐದು ಕೇಂದ್ರಗಳ ಸ್ಥಾಪನೆ ಮಾಡುತ್ತಿದೆ. ಆದರೆ, ಕುಂಭಕರ್ಣ ನಿದ್ದೆಗೆ ಕರ್ನಾಟಕ ಸರ್ಕಾರ ಮತ್ತೆ ಜಾರಿದೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕರ್ನಾಟಕ ಸರಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿರುವ ಮರಾಠಿಗರಿಗಾಗಿ ಮಹಾರಾಷ್ಟ್ರ ಸರಕಾರ ತನ್ನ ಮಹತ್ವದ ಮಹತ್ವಾಕಾಂಕ್ಷಿ ಮಹಾತ್ಮಾ ಫುಲೆ ಜನಾರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಇತ್ತೀಚಿಗೆ ಮಹಾರಾಷ್ಟ್ರದ ಉನ್ನತ ನಾಯಕರನ್ನುಳ್ಳ ನಿಯೋಗ ಬೆಳಗಾವಿಗೆ ಆಗಮಿಸಿ ಘೋಷಣೆ ಮಾಡಿತ್ತು. ಮಾತ್ರವಲ್ಲ, ಬೆಳಗಾವಿ ಗಡಿ ವಿವಾದ ಸಂಬಂಧ ಇಷ್ಟರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಬೆಳಗಾವಿಯ ಮರಾಠಿಗರಿಗೆ ಭರವಸೆ ನೀಡಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.