ಕುಂದಾಪುರ : ಕುಂಭಾಶಿಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪುರಾಣ ಪ್ರಸಿದ್ಧ ಈ ಪ್ರಾಚೀನ ದೇಗುಲಕ್ಕೆ ಆಗಮಿಸುವ ಭಕ್ತರು ಇನ್ನು ಮುಂದೆ ಸನಾತನ ಹಿಂದೂ ಸಾಂಪ್ರದಾಯಿಕ ಉಡುಪು ಧರಿಸಿ ಆಗಮಿಸಬೇಕು ಎಂದು ಸೂಚಿಸಲಾಗಿದೆ.
ಬರ್ಮುಡಾ ಮತ್ತು ತುಂಡು ಉಡುಗೆ(ಶಾರ್ಟ್ಸ್)
ಬಟ್ಟೆ ಧರಿಸಿ ಆಗಮಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.