ಬೆಳಗಾವಿ :
ಬೆಳಗಾವಿ-ಕಲಬುರಗಿ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದೊಂದು ಶುಭ ಸುದ್ದಿ. ಸ್ಟಾರ್ ಏ‌ರ್ ಸಂಸ್ಥೆಯಿಂದ ನೂತನ ವಿಮಾನ ಸೇವೆ ಪ್ರಾರಂಭವಾಗಿದೆ. ಇದರಿಂದಾಗಿ ಈ ನಗರಗಳಿಗೆ ತಲುಪಬೇಕಾದ ಜನರಿಗೆ ಇನ್ನು ಮುಂದೆ ಹೆಚ್ಚಿನ ಅನುಕೂಲವಾಗಲಿದೆ.

ಬೆಳಗಾವಿಯಿಂದ ರಸ್ತೆ ಮೂಲಕ ಕಲಬುರಗಿ ತಲುಪಲು 8 ಗಂಟೆ ಸಮಯ ಬೇಕಾಗುತ್ತಿತ್ತು. ಇನ್ನು ಈ ನೂತನ ವಿಮಾನ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಲಿದೆ.

ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸಂಖ್ಯೆ S5-153 ಸಂಪರ್ಕ ಕಲ್ಪಿಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 2:55 ಕ್ಕೆ ಹೊರಟು ಸಂಜೆ 4:05 ಕ್ಕೆ ತಿರುಪತಿಯಲ್ಲಿ ಇಳಿಯುತ್ತದೆ. ತಿರುಪತಿಯಲ್ಲಿ 20 ನಿಮಿಷಗಳ ಲೇಓವ‌ರ್ ಇದೆ. ಅಲ್ಲಿಂದ ಸಂಜೆ 4:30 ಕ್ಕೆ ಹೊರಟು 5:40 ಕ್ಕೆ ಕಲಬುರಗಿ ತಲುಪುತ್ತದೆ.
ಕಲಬುರಗಿಯಿಂದ ಬೆಳಗಾವಿಗೆ ಹಿಂದಿರುಗುವ
ವಿಮಾನ ಸಂಖ್ಯೆ S5-127 ಇದೆ. ಇದು
ಕಲಬುರಗಿಯಿಂದ ಸಂಜೆ 6:35 ಕ್ಕೆ ಹೊರಟು
ರಾತ್ರಿ 7:40 ಕ್ಕೆ ತಿರುಪತಿಗೆ ಆಗಮಿಸುತ್ತದೆ. 20
ನಿಮಿಷಗಳ ಲೇಓವ‌ರ್ ನಂತರ,
ತಿರುಪತಿಯಿಂದ ಸಂಜೆ 8:05 ಕ್ಕೆ ಹೊರಟು ರಾತ್ರಿ 8:50 ಕ್ಕೆ ಬೆಳಗಾವಿ ತಲುಪುತ್ತದೆ.
ಪ್ರಯಾಣ ದರ ಪ್ರತಿ ಟಿಕೆಟ್‌ಗೆ 6000 ರೂ. ಇರಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.