ಕುಂದಾಪುರ: ದೇಶದ ವಿವಿಧ ಭಾಗಗಳಲ್ಲಿ ನವರಾತ್ರಿಯ ಪೂಜಾ ಮಹೋತ್ಸವವನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಭಾಗದಲ್ಲಿ ನೆಲೆಸಿರುವ ರಾಜಸ್ಥಾನಿಗಳು, ನವರಾತ್ರಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಶಾಸಕ ಎ.ಕಿರಣ್ಕುಮಾರ ಕೊಡ್ಲಿ ಹೇಳಿದರು.
ಇಲ್ಲಿನ ಕುಂದೇಶ್ವರ ದೇವಸ್ಥಾನದ ಸಮೀಪದ ಗುರು ರಾಘವೇಂದ್ರ ಸ್ವಾಮಿಯ ಮಠದ ಸಭಾಂಗಣದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ರಾಜಸ್ಥಾನಿ ಬಂಧುಗಳು ಆಚರಿಸಿದ ದುರ್ಗಾದೇವಿ ಆರಾಧನೆಯಲ್ಲಿ ಅವರು ಮಾತನಾಡಿದರು.
ಪುರಸಭೆ ಅಧ್ಯಕ್ಷ ಮೋಹನ್ದಾಸ್ ಶೆಣೈ, ಕುಂದಾಪುರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ಬಿಜೆಪಿ ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಪುರಸಭಾ ಸದಸ್ಯರಾದ ಪ್ರಭಾಕರ್.ವಿ. ಬಿಜೆಪಿ ಪ್ರಮುಖ ಸತೀಶ್ ಶೆಟ್ಟಿ ಕಿದಿಯೂರು ಉಪಸ್ಥಿತರಿದ್ದರು.