Join The Telegram | Join The WhatsApp |
ಧರ್ಮಸ್ಥಳ :
ನಾಡಿನ ಪ್ರಸಿದ್ಧ ಕ್ಷೇತ್ರ ಶ್ರೀ ಧರ್ಮಸ್ಥಳ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮ ನ.19ರಿಂದ 23ರವರೆಗೆ ನಡೆಯಲಿದೆ .
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.ಧರ್ಮಾಧಿಕಾರಿ ಡಾ.ಡಿ,ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಪಂಚ ದಿನಗಳಲ್ಲಿ ಪಂಚ ಉತ್ಸವ ನಡೆಯಲಿದೆ. ಮೊದಲ ದಿನವಾದ ನ.19ರಂದು ರಾತ್ರಿ 9ಕ್ಕೆ ಹೊಸಕಟ್ಟೆ ಉತ್ಸವ ,ನ.20ರಂದು ಕೆರಕಟ್ಟೆ ಉತ್ಸವ ,ನ.21 ರಂದು ಲಲಿತೋದ್ಯಾನೆ ಉತ್ಸವ , ನ.22 ರಂದು ಕಂಚಿಮಾರುಕಟ್ಟೆ ಉತ್ಸವ, ನ 23 ರಂದು ಗೌರಿಮಾರು ಕಟ್ಟೆ ಉತ್ಸವ ಹಾಗೂ ನ.24 ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡೆಯಲಿದೆ.
Join The Telegram | Join The WhatsApp |