ಬೆಳಗಾವಿ: ಸಹ್ಯಾದ್ರಿ ನಗರದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ, ಉದ್ಯಾನವನ ಹಾಗೂ ಬೋರವೆಲ್ ಹಾಕಿಸುವ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ನೆರವೇರಿಸಿದರು.
ಮಹಾ ಶಿವರಾತ್ರಿಯ ಪ್ರಯುಕ್ತ ಮಹಾಬಲೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಸಚಿವರು, ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಅರ್ಚಕ ಅಡವಯ್ಯ ಹಿರೇಮಠ್, ವಿಜಯ ಹಿರೇಮಠ್, ಮಹಾಬಲೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಅಣ್ಣಯ್ಯ ಪಾಟೀಲ, ರಾಜು ಡೂಗನವರ, ಸುರೇಶ್ ಘೋರ್ಪಡೆ, ಸಂಜು ಅಂಗಡಿ, ಗೋಪಾಲ ಪಂಚಾಳ, ಹರೀಶ್ ಹಂಡೆ, ಮಲ್ಲಪ್ಪಾ ಮಾಕಿ, ಗುರುಸಿದ್ದ ಪಾಟೀಲ, ಅಡವಯ್ಯ ಸ್ವಾಮಿಗಳು, ರತ್ನಾ ಕುಲಕರ್ಣಿ, ಸುರಭಿ ಜಡಗಿ, ರಾಜಶ್ರೀ, ಅಶ್ವಿನಿ ಹಾವನ್ನಗೋಳ, ಸ್ನೇಹಾ ಪಾಟೀಲ ಉಪಸ್ಥಿತರಿದ್ದರು.