ಮುಜಾಫ‌ರ್ ನಗರ :

ಫೆಬ್ರವರಿ 14 ಪ್ರೇಮಿಗಳ ದಿನ. ಆ ದಿನ ಬರುವುದಕ್ಕಾಗಿ ಪ್ರೇಮಿಗಳು ಇದೀಗ ಎಲ್ಲೆಡೆ ಕಾತರರಾಗಿ ಕಾದು ಕುಳಿತಿದ್ದಾರೆ. ಆದರೆ, ಅದನ್ನು ವಿರೋಧಿಸಲು ಸಂಪ್ರದಾಯವಾದಿಗಳು ಹಾಗೂ ಕೆಲ ಕಟ್ಟರ್ ಸಂಘಟನೆಗಳು ಪ್ರತಿ ವರ್ಷ ಎಚ್ಚರಿಕೆ ರವಾನಿಸುತ್ತಾ ಇರುತ್ತವೆ. ಈ ವರ್ಷವೂ ಅಲ್ಲಲ್ಲಿ ಕೆಲ ಸಂಘಟನೆಗಳು ಪ್ರೇಮಿಗಳಿಗೆ ಎಚ್ಚರಿಕೆ ನೀಡಿವೆ.

ಪ್ರೇಮಿಗಳ ದಿನ ಬರುತ್ತಿದ್ದಂತೆ ಉತ್ತರ ಪ್ರದೇಶದ ಮುಜಾಫ‌ರ್ ನಗರದಲ್ಲಿ ಕ್ರಾಂತಿ ಸೇನೆಯ ಕಚೇರಿಯಲ್ಲಿ ದೊಣ್ಣೆಗಳಿಗೆ ಎಣ್ಣೆ ಹಚ್ಚಿ ಲಾಠಿ ಪೂಜೆ ಮಾಡಲಾಗಿದೆ. ಪ್ರೇಮಿಗಳ ದಿನದ ನೆಪದಲ್ಲಿ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ತಕ್ಕ ಪಾಠ ಕಲಿಸಲು ಲಾಠಿ ಪೂಜೆ ನಡೆಸಲಾಗಿದೆ ಎಂದು ಕ್ರಾಂತಿ ಸೇನೆಯ ಪ್ರತಿನಿಧಿಗಳು ತಿಳಿಸಿದ್ದಾರೆ. ಫೆಬ್ರವರಿ 14 ರಂದು ಲವರ್ಸ್ ಒಟ್ಟಿಗೆ ಕುಳಿತಿರುವುದು ಕಂಡುಬಂದರೆ, ಈ ಎಣ್ಣೆಯನ್ನು ಬಳಿದ ದೊಣ್ಣೆಗಳಿಂದ ಹೊಡೆಯಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.