Join The Telegram | Join The WhatsApp |
ಗದಗ :
ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಡಾ. ಸುಭಾಶ್ಚಂದ್ರ ರಾಠೋಡ ಅವರು ಹಿಂದೂ ಉತ್ತರಾಧಿಕಾರ ಕಾಯಿದೆ 1956 ಹಾಗೂ 2005 ರ ತಿದ್ದುಪಡಿಗೆ ಸಂಬಂಧಿಸಿದ ಪ್ರಾಯೋಗಿಕ ಇತ್ಯರ್ಥ ಪ್ರಕರಣಗಳೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ, ಪ್ರಾಧ್ಯಾಪಕರಾದ ಡಾ. ವಿಜಯ ವಿ. ಮುರದಂಡೆ, ಜ್ಯೋತಿ ಸಿ.ವಿ, ಡಾ. ಸಿ.ಬಿ. ರಣಗಟ್ಟಿಮಠ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ನಿವೇದಿತಾ ಮಾಡೋಳ್ಳಿ ನಿರೂಪಿಸಿದರು. ಚೈತ್ರಾ ಗೌಡ್ರ ವಂದಿಸಿದರು.
Join The Telegram | Join The WhatsApp |