Join The Telegram | Join The WhatsApp |
ಗದಗ :
ಕಾನೂನು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡುವುದರಿಂದ ಸಾಧ್ಯವಾಗದಿರುವ ವಿಷಯದಲ್ಲಿ ಹೆಚ್ಚಿನ ಸಾಧನೆ ಮಾಡಲು ನಿರಂತರ ಅಭ್ಯಾಸದಿಂದ ಸಾಧನೆ ಮಾಡಬಹುದು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಡಾ. ಸುಭಾಶ್ಚಂದ್ರ ರಾಠೋಡ ಹೇಳಿದರು.
ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಕಾಲೇಜು ಒಕ್ಕೂಟ, ಕ್ರೀಡಾ, ಸಂಸ್ಕೃತಿಕ ಮತ್ತು ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡಾ ಹಾಗೂ ಸಾಂಸ್ಕೃತಿಕ, ಎನ್.ಎಸ್.ಎಸ್‌ಗಳಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಲು ಈ ಚಟುಚಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ವಕೀಲರ ವೃತ್ತಿಯಲ್ಲಿ ಸಾಕಷ್ಟು ಮಾನಸಿಕ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿ ಯುವ ವಕೀಲರಲ್ಲಿ ತುಂಬುವ ಕಾರ್ಯಮಾಡಬೇಕಾಗಿದೆ. ಒಂದು ಪ್ರಕರಣವನ್ನು ನಡೆಸುವಾಗ ವಕೀಲರಾದವರು ಮಾನಸಿಕವಾಗಿ, ದೈಹಿಕವಾಗಿ ಸಧೃಡವಾಗಿರಬೇಕು ಇದರಿಂದ ಪ್ರತಿವಾದಿ ವಕೀಲರಿಂದ ನಾವು ವಾದವನ್ನು ಮಂಡಿಸಲು ಸಾಧ್ಯವಾಗುತ್ತದೆ. ಇತ್ತೀಚಿಗೆ ಯುವ ವಕೀಲರಲ್ಲಿ ಮಾನಸಿಕ ಸಿದ್ಧತೆ ಸಾಕಷ್ಟು ಎದ್ದು ಕಾಣುತ್ತಿದ್ದು, ಇದರಿಂದ ಪ್ರಕರಣಗಳಲ್ಲಿ ಗೆಲವು ದೊರೆಯುವುದು ಬಹಳಷ್ಟು ಕಡಿಮೆಯಾಗುತ್ತಿವೆ. ಆದ್ದರಿಂದ ವಕೀಲರು ಪ್ರತಿ ನಿತ್ಯ ಕಠಿಣ ಅಭ್ಯಾಸ ಮತ್ತು ಪ್ರತಿಯೊಂದು ಪ್ರಕರಣಗಳಲ್ಲಿ ಹೊಸ ಹೊಸ ಸೆಕ್ಷನ್‌ಗಳು ಬರುತ್ತಾ ಇರುತ್ತವೆ. ಆದ್ದರಿಂದ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಹೆಚ್ಚಿನ ಓದುವ ಹವಾಸ್ಯ ಹೆಚ್ವಿಸಿಕೊಳ್ಳಬೇಕು. ಸಮಾಜದಲ್ಲಿ ಸುಧಾರಣೆಯನ್ನು ಕಾಣಲು ವಕೀಲರ ಪಾತ್ರ ಬಹಳ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ವಕೀಲರಗಿಂತ ಕಕ್ಷಿಗಾರರು ಬಹಳ ಬುದ್ಧಿವಂತರಾಗಿದ್ದಾರೆ. ಆದ್ದರಿಂದ ವಕೀಲರಾಗುವ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿಯೂ ಆಳವಾದ ಅಭ್ಯಾಸ, ನಿತ್ಯ ದಿನ ಪತ್ರಿಕೆಗಳನ್ನು ಓದುವ ಹವಾಸ್ಯವನ್ನು ಬೆಳಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಎಲ್‌ಎಲ್.ಬಿ. ಪದವಿಯನ್ನು ಪಡೆದುಕೊಳ್ಳುವುದು ಕಷ್ಟ ಅಂತಾ ತಿಳಿದುಕೊಂಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೆ.ಎಲ್.ಇ ಸಂಸ್ಥೆಯ ಜೆ.ಟಿ.ಪಿ.ಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ಎಂ.ನರಗುಂದ, ಮಾತನಾಡಿ, ಸಂಸ್ಕೃತಿಕ ಮತ್ತು ಕ್ರೀಡಾ, ಎನ್.ಎಸ್.ಎಸ್ ಚಟುವಟಿಕೆಗಳು ಮಾನವನ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ಅಗತ್ಯವಿದೆ. ಇದರೊಂದಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೂಡ ಆದ್ಯತೆ ನೀಡಬೇಕಾಗಿದೆ. ವಕೀಲ ವೃತ್ತಿಯ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಬಹಳ ಪ್ರಮುಖವಾಗಿದೆ. ಕಲಿತ ಶಾಲೆ, ಕಾಲೇಜಗಳ ಬಗ್ಗೆ ಯಾವಾಗಲೂ ಗೌರವವನ್ನು ಹೊಂದುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಎಸ್.ಎ. ಮಾನ್ವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ ಮಾತನಾಡಿ, ಕಾನೂನು ಪದವಿ ಕಾಲೇಜಿನಲ್ಲಿ ಕೇವಲ ಅಭ್ಯಾಸಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾಲೇಜುಗಳು ಪ್ರಾರಂಭವಾಗಿ ಇನ್ನೂ ಒಂದು ತಿಂಗಳ ಕಳೆಯುವುದರಲ್ಲಿ ಈಗಾಗಲೇ ನಮ್ಮ ಕಾಲೇಜಿನಿಂದ ನಾಲ್ಕು ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಪ್ರತಿಯೊಂದು ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಸಮರ್ಥವಾಗಿದ್ದರೆ ಆ ವಿಷಯದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದರು.
ಸ್ಥಳೀಯ ಆಡಳಿತ ಮಂಡಳಿಯ ಚೇರಮನ್ ಎಸ್.ಎ. ಮಾನ್ವಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ವಾರ್ಷಿಕ ಸ್ಮರಣೆ ಸಂಚಿಕೆ ಹೊನಲು ಬಿಡುಗಡೆ ಮಾಡಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಆರ್. ಪಾಟೀಲ ಇವರು ಕಾನೂನು ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವುದಕ್ಕಾಗಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚಿಗೆ ವ್ಹೀಲ್ ಸ್ಟೆöÊಲ್ ಸ್ಕಿಪಿಂಗ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗಿನ್ನೀಸ್ ದಾಖಲೆಗೆ ಸೇರ್ಪಡೆಯಾದ ಆಕಾಶ ಜೋಗರಡ್ಡಿ, ಶ್ರವಣಕುಮಾರ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಡಾ. ಸಿ.ಬಿ. ರಣಗಟ್ಟಿಮಠ ಕಾಲೇಜು ಒಕ್ಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞೆವಿಧಿ ಬೋಧಿಸಿದರು. ಡಾ. ವಿಜಯ ವಿ. ಮುರದಂಡೆ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಫ್. ಹಾದಿಮನಿ, ಬಿ.ಜಿ. ಶೆಲ್ಲಿಕೇರಿ, ಸಹಾಯಕ ಪ್ರಾಧ್ಯಾಪಕರಾದ ಜೈಹನುಮಾನ ಎಚ್.ಕೆ., ಎಸ್.ಟಿ.ಮೂರಶಿಳ್ಳಿನ, ಬಿ.ಎ. ಹಿರೇಮಠ, ಜಿ.ಸಿ. ರೇಶ್ಮಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಚೈತ್ರಾ ಗೌಡರ ಪ್ರಾರ್ಥಿಸಿದರು. ವಿಜಯಕುಮಾರ ಬಂಡಿ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸಹನಾ ಕಾರ್ಕಳ ವಂದಿಸಿದರು.
Join The Telegram | Join The WhatsApp |