ಪುತ್ತೂರು: ಇಲ್ಲಿನ‌ ರೈಲ್ವೇ ನಿಲ್ದಾಣದಲ್ಲಿ ಮಾಡಿನ ಶೀಟು ಬಿದ್ದು ಇಬ್ನರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದ್ದು ಗಾಯಾಳುಗಳಿಗೆ ಸೂಕ್ತ‌ಚಿಕಿತ್ಸೆ ಕೊಡಿಸುವಂತೆ ರೈಲ್ವೇ ಅಧಿಕಾರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.
ಪುತ್ತೂರು ರೈಲ್ವೇ ಸ್ಟೇಷನ್ ಬಳಿ ಕಾಮಗಾರಿ ನಡೆಸಲಾಗುತ್ತಿದೆ. ನಿಲ್ದಾಣದ ಬಳಿ ಮಾಡು ನಿರ್ಮಾಣ‌ ಮಾಡುವಾಗ ಶೀಟು ಅಳವಡಿಸಿದ್ದು ,ಗಾಳಿಗೆ ಶೀಟು ಹಾರಿ ನಿಲ್ದಾಣದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರ‌ ಮೇಲೆ ಬಿದ್ದು ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳ ಚಿಕಿತ್ಸೆ ವ್ಯವಸ್ಥೆ ಮತ್ತು ಇಲಾಖೆಯಿಂದ ಸೂಕ್ತ ಪರಿಹಾರವನ್ನು ನೀಡುವಂತೆ ಅಧಿಕಾರಿ‌ ಮಿಶ್ರಾ ಅವರಿಗೆ ಶಾಸಕರು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯಂತೆ ರೈಲ್ವೇ ಇಲಾಖೆ ಗಾಯಾಳುಗಳಿಗೆ‌ ಚಿಕಿತ್ಸೆ ಮತ್ತು ಪರಿಹಾರ ನೀಡಲು ಒಪ್ಪಿಕೊಂಡಿದೆ.