ಬೆಂಗಳೂರು :
ರಾಜ್ಯದ ಡ್ರೈವಿಂಗ್ ಸ್ಕೂಲ್ ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಇದೀಗ ಆದೇಶ ಹೊರಡಿಸಿದೆ.

ಇನ್ಮುಂದೆ ಲಘು ಮೋಟಾರು ವಾಹನ, ಮೋಟಾರ್ ಸೈಕಲ್, ಆಟೋರಿಕ್ಷಾ ಮತ್ತು ಸಾರಿಗೆ ವಾಹನಗಳೆಂದು ನಾಲ್ಕು ವರ್ಗವಾಗಿ ವಿಂಗಡನೆ ಮಾಡಲಾಗಿದೆ. ಅವುಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಈಗ 4000 ರೂ. ಇದ್ದ ದರ ಇನ್ನು ಮುಂದೆ ಎಂಟು ಸಾವಿರ ಆಗಲಿದೆ. ಕಾರು ಚಾಲನೆ ತರಬೇತಿಗೆ 4000 ರೂ.ನಿಗದಿ ಮಾಡಲಾಗಿತ್ತು. ಎಲ್ಎಲ್ಆರ್ ,ಡಿಎಲ್ ಮಾಡಿಸಿ ಕೊಡುವುದಾಗಿ ಡ್ರೈವಿಂಗ್ ಸ್ಕೂಲ್ ನವರು ಒಟ್ಟು 8,000 ವಸೂಲಿ ಮಾಡುತ್ತಿದ್ದರು ಎಂಬ ದೂರುಗಳಿದ್ದವು.

ಜನವರಿಯಿಂದ ಕಾರು ಚಾಲನೆ ಕಲಿಯುವವರಿಗೆ 7,000 ರೂ.ವಿಧಿಸಲಾಗುತ್ತಿದೆ. ಇದಲ್ಲದೆ ಎಲ್ ಎಲ್ ಗೆ ರೂ. 350, ಡಿ ಎಲ್ ಗೆ ರೂ.1000 ಪ್ರತ್ಯೇಕವಾಗಿ ಆರ್‌ಟಿಒಗೆ ಪಾವತಿಸಬೇಕು. ಒಬ್ಬ ಅಭ್ಯರ್ಥಿಗೆ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು ರೂ.8,350 ಖರ್ಚು ಮಾಡಬೇಕಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಒಂದೇ ಮಾದರಿ ದರ ಇತ್ತು. ಆದರೆ, ಡ್ರೈವಿಂಗ್ ಸ್ಕೂಲ್ ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜು, ಇನ್ಸೂರೆನ್ಸ್, ಚಾಲಕರ ಸಂಬಳ ಮುಂತಾದವು ಸೇರಿ ಇನ್ನು ಮುಂದೆ ಹೆಚ್ಚಿನ ಶುಲ್ಕ ಪಡೆಯುವುದು ಅನಿವಾರ್ಯ ಎಂದು ಡ್ರೈವಿಂಗ್ ಸ್ಕೂಲ್ ಗಳ ಮಾಲೀಕರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್‌ಟಿಒಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಅಧ್ಯಯನ ಮಾಡಿ ವರದಿ ಸಿದ್ದಪಡಿಸಿ ಸಾರಿಗೆ ಇಲಾಖೆಗೆ 2 ವರ್ಷಗಳ ಹಿಂದೆ ಸಲ್ಲಿಸಿದ್ದು ಈಗ ಅಂಗೀಕಾರಗೊಂಡಿದೆ.

ಶುಲ್ಕ ಪರಿಷ್ಕರಣೆ, ವಾಹನಕ್ಕೆ ಮೊದಲು, ಈಗ :
ಮೋಟಾರ್ ಸೈಕಲ್ ರೂ. 2200 ಇನ್ಮುಂದೆ ರೂ. 3000

ಆಟೋರಿಕ್ಷಾ ರೂ.3000, ಇನ್ಮುಂದೆ ರೂ.4000

ಕಾರುಗಳು ರೂ.4000,ಇನ್ಮುಂದೆ ರೂ. 9000

ಸಾರಿಗೆ ವಾಹನ ರೂ. 6000 ಇನ್ಮುಂದೆ ರೂ.9000