ಹೆಬ್ರಿ : ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಹಾಗೂ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯನ್ನು ಹಬ್ಬವೆಂದು ಸಂಭ್ರಮಿಸಿ ಪ್ರೇರಣಾದಾಯಕ ಕಾರ್ಯಕ್ರಮ ನಡೆಯಿತು.
ಪ್ರೇರಣಾ ಗುರು ,ಶಿಕ್ಷಣ ತಜ್ಞ , ಮೈಸೂರು ಪರಿವರ್ತನ ಗ್ರೂಪು ಆಫ್ ಇನ್ಸ್ಟಿಟ್ಯೂಷನ್ ನ ಮುಖ್ಯಸ್ಥ ಚೇತನ್ ರಾಮ್ ಆರ್ ಎ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ದಡ್ಡ ವಿದ್ಯಾರ್ಥಿಗಳು ಹುಟ್ಟಿಯೇ ಇಲ್ಲ, ಸರಿ ನಿಯಮ ಪಾಲಿಸಿಕೊಂಡು ಓದಿದರೆ ಯಾರೂ ಕೂಡ ಸಾಧಿಸಬಹುದು. ಅಂಕ ಗಳಿಸಬಹುದು. ವಿದ್ಯಾರ್ಥಿಗೆ ವೈಯಕ್ತಿಕ ಅಧ್ಯಯನದಲ್ಲಿ 21 ಅಧ್ಯಯನ ಸಮಸ್ಯೆಗಳಿರುತ್ತವೆ, ಏಕೆ ಓದಬೇಕು ?, ಎಷ್ಟು ಓದಬೇಕು ? ಎಷ್ಟು ಬರೆಯಬೇಕು ? ಹೇಗೆ ಬರೆಯಬೇಕು ?ಓದುವ ಬರೆಯುವ ವೇಗ ಎಷ್ಟಿರಬೇಕು? ಇತ್ಯಾದಿ 21 ಅಂಶಗಳನ್ನು ಮನಗಂಡು ಅರಿತುಕೊಂಡಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ . ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಲು ಸಾಧ್ಯ ಎಂದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಗುರುದಾಸ್ ಶೆಣೈ , ಪ್ರಾಂಶುಪಾಲ ಅಮರೇಶ್ ಹೆಗ್ಡೆ , ಸಿ ಬಿ ಎಸ್ ಇ ಪ್ರಾಂಶುಪಾಲ ಅರುಣ್ ಎಚ್ ವೈ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿ ಚೇತನ್ ರಾಮ್ ಆರ್.ಎ. ಅವರನ್ನು ಸನ್ಮಾನಿಸಲಾಯಿತು. ಲಯನ್ ಟಿ. ಜಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿ , ಸುಹಾಸ್ ವಂದಿಸಿದರು.
ಲಯನ್ ಎನ್.ಎಂ. ಹೆಗಡೆ, ಮಾಜಿ ಜಿಲ್ಲಾ ಗವರ್ನರ್, ಕಾರ್ಯಕ್ರಮದ ಆಯೋಜನೆಯ ರೂವಾರಿಯಾಗಿದ್ದರು.
ಲಯನ್ ನಾಗೇಶ್ ನಾಯಕ್ ಸೀತಾನದಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಲಯನ್ ಟಿ.ಜಿ. ಆಚಾರ್ಯ
ಜಿಲ್ಲಾ ಮುಖ್ಯ ಸಂಯೋಜಕರು, (ವಿಷನ್ ಕೇರ್), ಲಯನ್ ಬೇಳಂಜೆ ಹರೀಶ್ ಪೂಜಾರಿ, ಪ್ರಾಂತ್ಯಾಧ್ಯಕ್ಷರು, ಲಯನ್ ರಘುರಾಮ ಶೆಟ್ಟಿ,
ವಲಯಾಧ್ಯಕ್ಷರು, ಲಯನ್ ಆಶಾ ಭುಜಂಗ ಶೆಟ್ಟಿ, ಲಯನ್ಸ್ ಕೋಶಾಧಿಕಾರಿ, ಲಯನ್ ಪ್ರಸಾದ್ ರೈ ಬೆಳ್ವೆ ಲಯನ್ಸ್ ಸದಸ್ಯರು ಭಾಗವಹಿಸಿದ್ದರು.