Join The Telegram | Join The WhatsApp |
ಗದಗ:
ಎಡ್ಸ್ ಮುಕ್ತಾ ಭಾರತಕ್ಕೆ ಎಲ್ಲರೂ ಕೈ ಜೋಡಿಸಬೇಕು ಆರೋಗ್ಯ ರಕ್ಷಣೆಗೆ ಜಾಗೃತಿ ವಹಿಸುವುದು ಅವಶ್ಯಕವೆಂದು ಜಿಲ್ಲಾ ಪಂಚಾಯತ ಸಿಇಒ ಡಾ.ಸುಶೀಲಾ ಬಿ ತಿಳಿಸಿದರು.
ನಗರದ ಕೆ.ಎಲ್.ಇ.ಸಂಸ್ಥೆಯ ಎಸ್.ಎ.ಮಾನ್ವಿ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ, ರೆಡ್ ಕ್ರಾಸ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ನಡೆದ ಜಾಥಕ್ಕೆ ಚಾಲನೆ ನೀಡುವ ಮೂಲಕ ಅವರು ಮಾತನಾಡಿದರು.
ಏಡ್ಸ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದೆ.
ಮಾನವನ ನಡವಳಿಕೆಗೆ ಸಂಬಂಧಪಟ್ಟ ಕಾಯಿಲೆ ಎಂದರೆ ಅದು ಏಡ್ಸ್. ಇದು ಹರಡುವಿಕೆಗೆ ಹಲವಾರು ಕಾರಣಗಳಿದ್ದರು ಸಂಯಮದಿಂದ ಇದ್ದಲ್ಲಿ ಏಡ್ಸ್ ಹತ್ತಿರ ಸುಳಿಯುವುದಿಲ್ಲ ಎಂದು ತಿಳಿಸಿದರು.
ನಗರಸಭೆ ಅವರಣದಿಂದ ಜಾಥ ಪ್ರಾರಂಭಗೊಂಡು ಗಾಂಧಿ ಸರ್ಕಲ್, ರೋಟರಿ ಸರ್ಕಲ್ ಮಾರ್ಗವಾಗಿ ಹಳೆ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು.
ಈ ವೇಳೆ ಸಂಯೋಜಕ ಡಾ ಸಿ.ಬಿ.ರಣಗಟ್ಟಿಮಠ, ಸೇರಿದಂತೆ ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು..
Join The Telegram | Join The WhatsApp |