ಬೆಳಗಾವಿ: ಸವದತ್ತಿ ತಾಲೂಕು ಅಚಮಟ್ಟಿ ಗ್ರಾಮದ ಜಮೀನು ವಿವಾದ ಸಂಬಂಧ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ 6 ನೇ ಅಪರ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಬ್ಬರಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ತಲಾ 50,000 ದಂಡ ವಿಧಿಸಿ ಇತ್ತೀಚಿಗೆ ತೀರ್ಪು ನೀಡಿದೆ.
ಅಚಮಟ್ಟಿ ಗ್ರಾಮದ ಓಂಕಾರ ಗೌಡ ಫಕೀರ ಗೌಡ ಮೇಲಿನಮನಿ ಉರ್ಫ್ ಪಾಟೀಲ ಮತ್ತು ದ್ಯಾಮನಗೌಡ ಫಕೀರ ಗೌಡ ಮೇಲಿನಮನಿ ಉರ್ಫ್ ಪಾಟೀಲ ಆರೋಪಿಗಳು.
ಜಮೀನು ಸಂಬಂಧ ಮಕ್ಕಳಿಲ್ಲದ ತಮ್ಮ ಚಿಕ್ಕಪ್ಪ ಈರನಗೌಡ ರುದ್ರಗೌಡ ಮೇಲಿನಮನಿ ಉರ್ಫ್ ಪಾಟೀಲ- 45 ಅವರನ್ನು ಕೊಲೆಗದಿದ್ದರು. ಈ ಹಿನ್ನಲೆಯಲ್ಲಿ ಈರನ ಗೌಡ ಅವರ ಪತ್ನಿ ಶ್ರೀದೇವಿ ಅವರು, ಆರೋಪಿಗಳು ತಮ್ಮನ್ನು ಕೊಲೆ ಮಾಡಲು ಮತ್ತು ಪುರಾವೆ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಸವದತ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ತನಿಖೆ ನಡೆದು ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.